ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಆಯ್ದ ದಿವ್ಯಾಂಗರಿಗೆ ಅಶಕ್ತರಿಗೆ ಆಹಾರ ಕಿಟ್, ಔಷಧಿ ಕಿಟ್, ಮನೆ ನಿರ್ಮಾಣಕ್ಕೆ ಧನ ಸಹಾಯ ಕಾರ್ಯಕ್ರಮವು ವಿಪ್ರ ಶ್ರೀ ಸಭಾ ಭವನದಲ್ಲಿ ನಡೆಯಿತು.
ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ತಂಡದಿಂದ ಮನೆಯಲ್ಲಿ ಬೇಡವಾದ ಕಬ್ಬಿಣ, ಪ್ಲಾಸ್ಟಿಕ್,ಪೇಪರ್, ಗುಜುರಿ ಸಾಮಗ್ರಿಗಳನ್ನು ಸಂಗ್ರಹಿಸಿ ದಿವ್ಯಾಂಗರಿಗೆ ವೀಲ್ ಚೆಯರ್,ಆಹಾರ ಕಿಟ್, ಶಿಕ್ಷಣಕ್ಕೆ ಧನ ಸಹಾಯ, ಆರೋಗ್ಯ ಕಿಟ್ ಗಳನ್ನು ವಿತರಣೆ ಮಾಡುವ 26 ನೇಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು,
ದಿವ್ಯಾಂಗರ ಸೇವೆಯೇ ದೇವರ ಸೇವೆ ಈ ಸೇವೆಯ ಮುಖಾಂತರ ನಾವು ದೇವರನ್ನು ನೋಡಬಹುದು ನಿಸ್ವಾರ್ಥವಾದಂತಹ ಸೇವೆಯನ್ನು ಮಾಡುವುದೇ ದಿವ್ಯಾಂಗ ರಕ್ಷಣಾ ಸಮಿತಿಯ ಉದ್ದೇಶ. ಉಡುಪಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ನಾಗರಿಕರು ಈ ಸಂಘಟನೆಗೆ ಬಂದು ದುಡಿಯಲು ಸಾಧ್ಯವಿಲ್ಲದ ಮತ್ತು ದಿವ್ಯಾಂಗಾರ ಸೇವೆಯನ್ನು ಮಾಡೋಣ ಎಂದು 27ನೆಯ ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜನಾರ್ದನ ಭಟ್ ಕೊಡವೂರು, ಲಕ್ಷ್ಮೀಶ ಮಲ್ಪೆ, ಓಜ್ವಾಲ್ಡ್ ಪಿರೇರಾ, ಅಶೋಕ್ ಶೆಟ್ಟಿಗಾರ್ ಮತ್ತಿತರು ಹಾಜರಿದ್ದರು. ಹರೀಶ್ ಕೊಪ್ಪಲ್ ತೋಟ ಎಲ್ಲರನ್ನೂ ಸ್ವಾಗತಿಸಿ, ಅಖಿಲೇಶ್ ವಂದಿಸಿದರು.
















Leave a Reply