Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಂಗಳೂರಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ- 2’

ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ-50 ರ ಸುವರ್ಣ ಪರ್ವದ ಎರಡನೆ ಕಾಯಕ್ರಮವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ  ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ  ಅಕ್ಟೋಬರ್ 20ರ ಆದಿತ್ಯವಾರ ಸಂಜೆ 4.30 ಕ್ಕೆ ನಡೆಯಲಿದೆ. ಅಂದಿನ ಸಭೆಯಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ ಮಂಗಳೂರು ಕೋಡಿಕಲ್‌ನ ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳದ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿ ಅವರಿಗೆ ಸುವರ್ಣ ಕಲಾ ಗೌರವ  ಪುರಸ್ಕಾರ ನೀಡಲಾಗುವುದು.

ನಮ್ಮೊಂದಿಗೆ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ರಾಜ್ಯ ಕ.ಸಾ.ಪ.ದ ಪೂರ್ವಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀದರ ಹಂದೆ, ಲೆಕ್ಕ ಪರಿಶೋಧಕರಾದ ಪ್ರಕಾಶ್ ಬಾಸ್ರಿ ಮಂಗಳೂರು, ಪತ್ತುಮುಡಿಯ ಜನತಾ ಡಿಲಕ್ಸ್ ಮಾಲಕರಾದ ಸೂರ್ಯನಾರಾಯಣ ರಾವ್, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಪಿ.ಎಲ್. ಉಪಾಧ್ಯಾಯ, ಲೆಕ್ಕ ಪರಿಶೋಧಕರಾದ ಶಿವಾನಂದ ಪೈ ಮಂಗಳೂರು, ಯಕ್ಷಾರಾಧನ ಕಲಾಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್, ಚಯರ್ ಸ್ಟುಡಿಯೋ ಮಾಲಕರಾದ ಎನ್. ರಾಘವೇಂದ್ರ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ
ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ ಮಂಗಳೂರು ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ವೀರವೃಷಸೇನ ಯಕ್ಷಗಾನ ಪ್ರದರ್ಶನವಿದೆ ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *