
ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ನಕಲಿ ಖಾತೆ ಸೃಷ್ಟಿಸಿ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಕುಂದಾಪುರ ಮಿತ್ರ ಸಂಪಾದಕ ಟಿ.ಪಿ. ಮಂಜುನಾಥರವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಫೇಸ್ಬುಕ್ ನಲ್ಲಿ ಅಕಾಶವಾಣಿ ನಾಡ ಸಂಪಾದಕ ಹಾಗೂ ಆಕಾಶವಾಣಿ ನಾಡ ಎನ್ನುವ ಎರಡು ನಕಲಿ ಪೇಜ್ ಗಳನ್ನು ಸೃಷ್ಟಿಸಿ ಸಮಾಜದ ಕೆಲವು ಗಣ್ಯ ವ್ಯಕ್ತಿಗಳ ಹಾಗೂ ಇತರರ ವಿರುದ್ಧ ಗೌರವಕ್ಕೆ ಧಕ್ಕೆ ತರುವ ಬರಹಗಳನ್ನು ಬರೆಯುತ್ತಿರುವುದಲ್ಲದೇ, ಈ ಬರಹಗಳಿಗೂ ನನಗೂ ಸಂಬಂಧವಿದೆ ಎನ್ನುವ ಭಾವನೆ ಬರುವಂತೆ ಪೇಜ್‌ನಲ್ಲಿ ಕಮೆಂಟ್ಸ್ ಗಳನ್ನು ಬರೆದು ನನ್ನ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ. ಕಿಡಿಗೇಡಿಗಳು ಉದ್ದೇಶಿತ ಕೃತ್ಯಗಳಿಗೆ ನನ್ನ ಫೋಟೋಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದು, ನಕಲಿ ಖಾತೆಗಳನ್ನು ಸೃಷ್ಟಿಸಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.














Leave a Reply