Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ: ನ‌ಗರದ ವಿವಿಧೆಡೆ ವೇಶ್ಯಾವಾಟಿಕೆ ಹಾಗೂ ಅವಧಿ ಮೀರಿ ಹೊಟೇಲ್‌ ವ್ಯವಹಾರ : ಪೊಲೀಸರಿಂದ ರಾತ್ರಿ ಕಾರ್ಯಚರಣೆ…!!

ಉಡುಪಿ: ನಗರದ ವಿವಿಧೆಡೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಅವಧಿ ಮೀರಿ ಹೊಟೇಲ್‌ಗ‌ಳು ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ಭಾಗದಲ್ಲಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ನೂರಾರು ಪೊಲೀಸರು ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿಬಸ್ ನಿಲ್ದಾಣ,ನರ್ಮ್ ಬಸ್ ನಿಲ್ದಾಣ,ಕೆ ಎಸ್ ಅರ್ ಟಿ ಸಿ ಹಳೇ ಬಸ್ಸು ನಿಲ್ದಾಣ ,ಬನ್ನಂಜೆಯ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣ ,ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್ ಎದುರು‌ ಭಾಗದಲ್ಲಿರುವ ನಿರ್ಜನ ಪ್ರದೇಶದಲ್ಲಿರುವ ಮಂಗಳಮುಖಿಯರ ಅಡ್ಡೆ ಬಳಿ ಕಾರ್ಯಚರಣೆಗಿಳಿದಿದ್ದರು.ಪೊಲೀಸರ ದಂಡು ಕಂಡ ಮಂಗಳಮುಖಿಯರು ನಗರದಿಂದ ಕಾಲ್ಕಿತ್ತರು.ಅದರೆ ಬೆನ್ನು ಹಿಡಿದ ಪೊಲೀಸರು ಸಿಟಿ ಬಸ್ ನಿಲ್ದಾಣದ ಬಳಿಯ ಕತ್ತಲೆ ಪ್ರದೇಶಗಳಲ್ಲಿ ಅವಿತು ಕುಳಿತ್ತಿದ್ದ ಮಂಗಳ ಮುಖಿಯರನ್ನ ಹಿಡಿದು ಹೊರ ಕರೆದು ಎಚ್ಚರಿಕೆ ನೀಡಿ ಕಳುಹಿಸಿದರು ಎಂದು ಮಾಹಿತಿ ತಿಳಿದು ಬಂದಿದೆ.

ಉಡುಪಿ ನಗರ ಬಸ್ಸು ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಗೂ ಪೊಲೀಸರು ಲಾಠಿ ರುಚಿ ತೋರಿಸಿದರು. ಅಲ್ಲಲ್ಲಿ ಬೀದಿ ಬದಿ ತೂರಾಡುತ್ತಿದ್ದವರಿಗೂ ಬಿಸಿ ಮುಟ್ಟಿಸಿದರು.ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಹಿಡಿದು ತಪಾಸಣೆ ನಡೆಸಿ ಎಚ್ಚರಿಕೆಯನ್ನು ನೀಡಿದರು‌.

ನಗರದ ಸಿಟಿ ಬಸ್ ನಿಲ್ದಾಣದ ಬಳಿ ಮಂಗಳಮುಖಿಯರ ಕಾಟ ಹೆಚ್ಚಾಗಿತ್ತು. ಇದರ ಜೊತೆಗೆ ಕುಡುಕರ ಕಾಟ ಕೂಡ ಮಿತಿಮೀರಿತ್ತು .ಸಭ್ಯರು ನಡೆದುಕೊಂಡು ಹೋಗದಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ,ಪೊಲೀಸ್ ಬಂದೂಬಸ್ತ್ ಹಾಕಲಾಗಿತ್ತು.ಅದ್ರೆ ಪೊಲೀಸರನ್ನ ಕ್ಯಾರೇ ಅನ್ನದೇ ಮಂಗಳ ಮುಖಿಯರು ತಮ್ಮ ಚಾಳಿ ಮುಂದುವರೆಸಿದ ಕಾರಣ ನಗರ ಠಾಣೆ ಪೊಲೀಸರು ಕಾರ್ಯಚರಣೆಗಿಳಿದಿದ್ದರು ಎಂದು ಮಾಹಿತಿ ತಿಳಿಯಲಾಗಿದೆ.

Leave a Reply

Your email address will not be published. Required fields are marked *