Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭತ್ತಕ್ಕೆ ಕಡಿಮೆ ಬೆಲೆ: ನವೆಂಬರ್ ಮೊದಲ ವಾರದಲ್ಲಿ ಪ್ರತಿಭಟನೆಗೆ ರೈತ  ಧ್ವನಿ ನಿರ್ಧಾರ

ಕೋಟ: ಭತ್ತಕ್ಕೆ ನ್ಯಾಯಯುತವಾದ ಬೆಲೆಯನ್ನು ನಿಗಡಿಪಡಿಸಬೇಕು ಎನ್ನುವ ರೈತರ ಬೇಡಿಕೆಗೆ ಅಕ್ಕಿ ಗಿರಣಿಗಳು ಸ್ಪಂದಿಸದಿರುವುದರಿAದ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರವನ್ನು ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನವೆಂಬರ್ ಪ್ರಥಮ ವಾರದಲ್ಲಿ ನಿಗದಿತ ದಿನದಂದು ಕೋಟದಲ್ಲಿ  ಪ್ರತಿಭಟನೆ ನಡೆಸಲು ಸ್ಥಳೀಯ ರೈತಧ್ವನಿ  ಸಂಘಟನೆ ವತಿಯಿಂದ ಅ.23ರಂದು ಕೋಟದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಾಗತಿಕ ಬದಲಾವಣೆಗಳು, ಮಾರುಕಟ್ಟೆ ಮೌಲ್ಯವನ್ನು ಅವಲಂಭಿಸಿ ದರ ನಿಗದಿಯಾಗುತ್ತದೆ ಎನ್ನುವ ಮಿಲ್ ಮಾಲಕರ ಹೇಳಿಕೆ ಸತ್ಯಾಂಶದಿAದ ಕೂಡಿಲ್ಲ. ಬೆಲೆ ನಿಗದಿಪಡಿಸುವಲ್ಲಿ ಮಿಲ್‌ಗಳ ಪಾತ್ರವೇ ಮುಖ್ಯವಾಗಿದೆ. ಆದರೆ ರೈತರಿಂದ ಕಡಿಮೆ ಬೆಲೆಗೆ ಭತ್ತವನ್ನು ಖರೀದಿ ಅದರ ಎರಡು-ಮೂರು ಪಟ್ಟು ಹೆಚ್ಚು ದರಕ್ಕೆ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ. ಭತ್ತದಿಂದ ಹೊಟ್ಟು,ಬೂದಿ ಮೊದಲಾದ ಬೆಲೆ ಬಾಳುವ ವಸ್ತುಗಳು ಉತ್ಪತ್ತಿಯಾಗುತ್ತದೆ  ಎಂದು ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ತಿಳಿಸಿದರು.

ಮಿಲ್‌ಗೆ ಮುತ್ತಿಗೆ :-
  ರೈತರು ಬೆಳೆದ ಬೆಳೆಗೆ ನ್ಯಾಯಯುತ ದರ ನೀಡದ ಮಿಲ್ ಮಾಲಕರ ಬಗ್ಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು, ಎಸ್.ಪಿ. ಅವರಿಗೆ ಮನವಿ ನೀಡಲಾಗಿದೆ. ನವೆಂಬರ್ ಪ್ರಥಮ ವಾರದಲ್ಲಿ ನಿಗದಿತ ದಿನದಂದು ಸಾವಿರಾರು ಸಂಖ್ಯೆಯ ರೈತರು ಕೋಟದಲ್ಲಿ ಸಭೆ ನಡೆಸಿ ತೆಕ್ಕಟ್ಟೆ ತನಕ ಪಾದಯಾತ್ರ ನಡೆಸಿ ಅಲ್ಲಿನ ಅಕ್ಕಿ ಮಿಲ್‌ಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಮತ್ತು ಪ್ರತಿಯೊಂದು ಊರುಗಳಲ್ಲೂ ಹೋರಾಟ ನಡೆಸಲಿದ್ದೇವೆ ಎಂದು ರೈತಧ್ವನಿಯ ಪ್ರಮುಖರಾದ ಟಿ.ಮಂಜುನಾಥ ತಿಳಿಸಿದರು. ಈ ಬಗ್ಗೆ ರೈತರು ಸಹಮತ ವ್ಯಕ್ತಪಡಿಸಿದರು.
ರೈತರಾದ ಭಾಸ್ಕರ್ ಶೆಟ್ಟಿ, ಶಿವಮೂರ್ತಿ, ಶಿವ ಪೂಜಾರಿ, ತಿಮ್ಮ ಕಾಂಚನ್, ಭೋಜ ಪೂಜಾರಿ ಮೊದಲಾದವರು ಇದ್ದರು.

ರೈತಧ್ವನಿ  ಸಂಘಟನೆ ವತಿಯಿಂದ ಅ.23ರಂದು ಕೋಟದಲ್ಲಿ ನಡೆದ ಸಭೆ ಭತ್ತಕ್ಕೆ ನೈಜ ಬೆಲೆ ಆಗ್ರಹಿಸಿ ತುರ್ತು ಸಭೆ ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ  ಅಧ್ಯಕ್ಷತೆಯಲ್ಲಿ ಅ.23ರಂದು ಜರಗಿತು. ರೈತಧ್ವನಿಯ ಪ್ರಮುಖರಾದ ಟಿ.ಮಂಜುನಾಥ, ರೈತರಾದ ಭಾಸ್ಕರ್ ಶೆಟ್ಟಿ, ಶಿವಮೂರ್ತಿ, ಶಿವ ಪೂಜಾರಿ, ತಿಮ್ಮ ಕಾಂಚನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *