Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಹುಟ್ಟುರಲ್ಲೇ ST ಜನಾಂಗದವರಿಗೆ ಘನ ಘೋರ ಅನ್ಯಾಯ – ಡ್ಯಾವಪ್ಪ ಗೋಮುಖ ವ್ಯಾಘ್ರ ನ ಅವಾಂತರ ಬಟ್ಟಾ ಬಯಲು ಅಮಾಯಕರಿಗೆ ನಿತ್ಯ ಕಿರುಕುಳ ಗಂಭೀರ ಆರೋಪ…..?!

ಸಾಗರ :  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಮಾಲ್ವೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ST ಜನಾಂಗದವರ ಶ್ರೇಯೋಭೀಲಾಶಿಗಾಗಿ 20% SC – ST ಅನುದಾನದಲ್ಲಿ ಸಮುದಾಯದ ಭವನ ಮಂಜೂರು ಆಗಿದ್ದು ಸರಿಯಷ್ಟೇ ಗೋ ಮುಖ ವ್ಯಾಘ್ರ ದ್ಯಾವಪ್ಪ ಕುತಂತ್ರದಿಂದ ST ಸಮುದಾಯದ ಒಂದೇ ಒಂದೂ ಕುಟುಂಬ ವಾಸವಿರದ ಕಡೆ ಸಮುದಾಯದ ಭವನ ನಿರ್ಮಿಸಿದ್ದು ST ಸಮುದಾಯದವರಿಗೆ ಘನ ಘೋರ ಅನ್ಯಾಯವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯರ ದೂರಿನ ಮೇರೆಗೆ ಸಮುದಾಯದ ಭವನ ನಿರ್ಮಾಣದ ತನಿಖೆಗೆ ಆಗಮಿಸಿದ್ದ ತನಿಖಾಧಿಕಾರಿಗೆ ದ್ಯಾವಪ್ಪ ಪಟಾಲಂ ತನಿಖಾಧಿಕಾರಿಗಳಿಗೆ ಅನ್ಯ ಸಮುದಾಯದವರು ವಾಸವಿರುವವರೆಲ್ಲರೂ ST  ಜನಾಂಗದವರು ಎಂದೂ ತಪ್ಪು ಮಾಹಿತಿ ನೀಡಿರುವ ಮಾಹಿತಿ ಬಲ್ಲ ಮೂಲಗಳಿಂದ ದೊರೆತಿದೆ.

ST ಜನಾಂಗದ ಕಲ್ಯಾಣಕ್ಕಾಗಿ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಸ್ನೇಹಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರು ನೂತನ ಸಮುದಾಯದ ಭವನ ಮಂಜೂರು ಮಾಡಿಕೊಡುವಂತೆ ಮಾಲ್ವೇ ಗ್ರಾಮ ಪಂಚಾಯಿತಿಯ ST ಜನಾಂಗದವರು ಮನವಿ ಮಾಡಿದ್ದಾರೆ.

✍️ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *