Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ – ಆರೋಗ್ಯ ಇಲಾಖೆಯಿಂದ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಸನ್ಮಾನ

ರಕ್ತದಾನದ ಮಹತ್ವ ಪ್ರತಿಯೊಬ್ಬರು ಅರಿಯಬೇಕು- ಡಾ.ಕೆ ಎಸ್ ಕಾರಂತ್

ಕೋಟ: ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ
ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಇವರ ನೇತೃತ್ವದಲ್ಲಿ ಶ್ರೀ ಅಘೋರೇಶ್ವರ ಕಲಾರಂಗ  ಕಾರ್ತಟ್ಟು, ಚಿತ್ರಪಾಡಿ ಶ್ರೀ ಗುರು ಫೆಂಡ್ಸ್, ರಥಬೀದಿ, ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ರಕ್ತನಿಧಿ ವಿಭಾಗ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಸಾಲಿಗ್ರಾಮ ದೇಗುಲದ  ಕೂಟಬಂಧು ಭವನದಲ್ಲಿ  ಆಯೋಜಿಸಿತು.

ಕಾರ್ಯಕ್ರವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ  ಡಾ| ಕೆ.ಎಸ್. ಕಾರಂತ ಉದ್ಘಾಟಿಸಿ ಮಾತನಾಡಿ ರಕ್ತದಾನ ಎಂಬುವುದು ಶ್ರೇಷ್ಠ ದಾನಗಳಲ್ಲೊಂದು ರಕ್ತದ ಮಹತ್ವ ಅರಿತು ರಕ್ತದಾನಗೈಯಬೇಕು ಆಗ ಅಗತ್ಯ ಇರುವ ಜೀವಗಳಿಗೆ ಮೌಲ್ಯ ದೊರೆತಂತೆ ಈ ದಿಸೆಯಲ್ಲಿ ಇಲ್ಲಿನ ಸಂಘಟಕರ ಕಾರ್ಯ ಅಭಿನಂದನಾರ್ಹ ಕಾರ್ಯವಾಗಿದೆ.ಸಮಾಜದಲ್ಲಿ ಇಂಥಹ ಕಾರ್ಯಕ್ರಮಗಳು ನಿರಂತವಾಗಿ ನಡೆಯುತ್ತಿರಬೇಕು ಎಂದು ಆಶಿಸಿದರು. ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ  ವಹಿಸಿ ಸ್ವಾಗತಿಸಿದರು.

ರಕ್ತದಾನದ ಬಗ್ಗೆ ಮಾಹಿತಿಯನ್ನು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಡಾ. ವೀಣಾ  ನೀಡಿದರು.
ಇದೇ ವೇಳೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಸರಕಾರಿ ಕ್ಷೇತ್ರ ಆರೋಗ್ಯ ಇಲಾಖೆಯಿಂದ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಯುವ ವೇದಿಕೆಯ ಗೌರವಾಧ್ಯಕ್ಷ  ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಸಾಮಾಜಿಕ ಕಾರ್ಯಕ್ಕೆ ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ  ಕೂಟಮಹಾಜಗತ್ತು ಅಂಗಸAಸ್ಥೆ ಸಾಲಿಗ್ರಾಮ ಇದರ ಅಧ್ಯಕ್ಷ ಚಂದ್ರಶೇಖರ್ ಹೊಳ್ಳ,ಮಾಜಿ ಅಧ್ಯಕ್ಷ ಶ್ರಿಪತಿ ಅಧಿಕಾರಿ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ,ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಉಮೇಶ್ ನಾಯರಿ,ಶ್ರೀ ಗುರು ಫ್ರೆಂಡ್ಸ್ ರಥಬೀದಿ ಇದರ ಅಧ್ಯಕ್ಷ ರಾಧಕೃಷ್ಣ,ಎ.ಪಿ ಅಸೋಸಿಯೇಟ್ ಉಳ್ಳೂರು ಇದರ ಮುಖ್ಯಸ್ಥ ಗಣೇಶ್ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವ ವೇದಿಕೆಯ ಗೌರವ ಸಲಹೆಗಾರ  ಶಶಿಧರ್ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ  ಯುವ ವೇದಿಕೆಯ ಕಾರ್ಯದರ್ಶಿ ಶ್ರೀಕಾಂತ್ ಐತಾಳ್  ವಂದಿಸಿದರು.

ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ
ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಇವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಡಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಗೌರವಾಧ್ಯಕ್ಷ  ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಸಾಮಾಜಿಕ ಕಾರ್ಯಕ್ಕೆ ಗುರುತಿಸಿ ಸನ್ಮಾನಿಸಲಾಯಿತು. ಕೂಟಮಹಾಜಗತ್ತು ಅಂಗಸAಸ್ಥೆ ಸಾಲಿಗ್ರಾಮ ಇದರ ಅಧ್ಯಕ್ಷ ಚಂದ್ರಶೇಖರ್ ಹೊಳ್ಳ,ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಉಮೇಶ್ ನಾಯರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *