
ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಂತೆ ಸುಂಕ ಹರಾಜು ವಿಳಂಬ – ಸಂತೆ ಸುಂಕ ಹರಾಜ್ ವಿಳಂಬ ಮಾಡಿದ್ದೇ ಹಗಲುದರೋಡೆಗಾಗಿ – ಪ್ರತಿ ವಾರ ಸಂತೆ ಸುಂಕ ವಸೂಲಾತಿಯನ್ನೂ ಅಕ್ರಮವಾಗಿ ವಸೂಲಾತಿ ಮಾಡಿ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಐಎಎಸ್ ಅಧಿಕಾರಿಗೆ ಕಪ್ಪ ಕಾಣಿಕೆ ಸಲ್ಲಿಕೆ ಗಂಭೀರ ಆರೋಪ – ಕಪ್ಪ ಕಾಣಿಕೆ ಋಣಕ್ಕೆ ಒಳಗಾದ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ವಿರುದ್ಧ ಗಂಭೀರ ಆರೋಪ ತನಿಖೆ ನೆಡೆಸಿ ಸತ್ಯಾಸತ್ಯತೆ ಹೊರ ಬರಲಿ ಎಂದೂ ತಾಳಗುಪ್ಪ ಗ್ರಾಮ ಪಂಚಾಯಿತಿ ಪ್ರಜ್ಞಾವಂತರ ಆಗ್ರಹ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಮತಕ್ಷೇತ್ರವಾದ ಸೊರಬ ವಿಧಾನಸಭಾ ಕ್ಷೇತ್ರದ ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿಯ ತಾಳಗುಪ್ಪ ಗ್ರಾಮ ಪಂಚಾಯಿತಿಯ ಬಾರಿ ಅವ್ಯವಹಾರ ಅಕ್ರಮ ಮಿತಿ ಮೀರಿದ ಭ್ರಷ್ಟಾಚಾರ ವಿರುದ್ಧ ಸೂಕ್ತ ತನಿಖೆಗಾಗಿ ಸಮುಚಿತ ಮಾರ್ಗದಲ್ಲಿ ಸೂಕ್ತ ದಾಖಲಾತಿಗಳ ಕಡತಗಳನ್ನೂ ಖುದ್ದಾಗಿ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಐಎಎಸ್ ರವರಿಗೆ ಸಲ್ಲಿಸಿದರೂ ನ್ಯಾಯಯುತ ತನಿಖೆಗೆ ಮೀನಾಮೇಷ ಹಿಂದೇ ಎಂಜಲು ಕಾಸಿಗೆ ಒಳಗಾಗಿರಬಹುದೇ……..?! ಕಟ್ಟಕಡೆಯದಾಗಿ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಐಎಎಸ್ ನಡೆ ಸುತ್ತ ಅನುಮಾನಗಳ ಹುತ್ತ ಮೂಡುವುದು ಪ್ರಜ್ಞಾವಂತರಲ್ಲಿ ಯಕ್ಷ ಪ್ರೆಶ್ನೆಹೀಗೂ ಉಂಟೇ..?
ವರದಿ : ಓಂಕಾರ ಎಸ್. ವಿ.ತಾಳಗುಪ್ಪ
Leave a Reply