
ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಸಾರಥ್ಯದಲ್ಲಿ ಜರುಗಿದ ಜನ ಸ್ಪಂದನಾ ಸಭೆಯಲ್ಲಿ ಸಾರ್ವಜನಿಕರೂ ಸಲ್ಲಿಸಿದ ಮನವಿ ಪತ್ರಗಳು ಇನ್ನೂ ತಹಸೀಲ್ದಾರ್ ಕಛೇರಿಯಲ್ಲೇ ಕೊಳೆಯುತ್ತಿದೆ – ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಆದೇಶ ಜಿಲ್ಲಾ ಉಸ್ತುವಾರಿ ಸಭೆಗೆ ಗೌರವ ನೀಡದೇ ಇರುವ ಭ್ರಷ್ಟ ಸೋಮಾರಿ ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ ಧೋರಣೆಯುಳ್ಳ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಭ್ರಷ್ಟ ಸೋಮಾರಿ ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷ ಧೋರಣೆಯುಳ್ಳ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ
ತಾಳಗುಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ತಾಳಗುಪ್ಪದಲ್ಲಿ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರೂ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಮಧು ಬಂಗಾರಪ್ಪ ರವರ ಸಾರಥ್ಯದಲ್ಲಿ ಜರುಗಿದ ” ಜನ ಸ್ಪಂದನಾ ಸಭೆ ” ಅತ್ಯಂತ ಯಶಸ್ವಿಯಾಗಿ ನೆಡೆದಿರುವುದು ಇತಿಹಾಸ.
“ಜನ ಸ್ಪಂದನಾ ಸಭೆ ” ಯಲ್ಲಿ ಸಾರ್ವಜನಿಕರ ಕುಂದು ಕೊರತೆ ಅರ್ಜಿಗಳು ಸಂಭಂದ ಪಟ್ಟ ಇಲಾಖೆಗೆ ಸೂಕ್ತ ಪರಿಹಾರಕ್ಕಾಗಿ 28 ದಿನಗಳು ಗತಿಸುತ್ತಾ ಬಂದರೂ ಕಂದಾಯ ಇಲಾಖೆಯವರು ಆಯಾಯ ಇಲಾಖೆಗೆ ಪತ್ರ ವ್ಯವಹಾರ ಮಾಡದೇ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಅವಮಾನ ಮಾಡಿರುವ ಬೇಜವಾಬ್ದಾರಿ ಸೋಮಾರಿ ಕರ್ತವ್ಯ ಲೋಪ ಕರ್ತವ್ಯ ನಿರ್ಲಕ್ಷತನ ಕಂದಾಯ ಅಧಿಕಾರಿಗಳ ವಿಳಂಬ ಧೋರಣೆ ವಿರುದ್ಧ ಸಾರ್ವಜನಿಕರೂ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಉಸ್ತುವಾರಿ ಸಚಿವರ ಸಾರಥ್ಯದಲ್ಲಿ ನೆಡೆದ ” ಜನ ಸ್ಪಂದನಾ ಸಭೆ ” ಯಲ್ಲಿ ಸಾರ್ವಜನಿಕ ಕುಂದು ಕೊರತೆ ಅರ್ಜಿಗಳನ್ನು ಪರಿಹಾರ ಕಲ್ಪಿಸದೇ ಅಧಿಕಾರಿಗಳ ಕುರ್ಚಿ ಅಡಿಯಲ್ಲೇ ಕೊಳೆಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುತ್ತಾರಾ …..?!ಶಿಕ್ಷಣ ಸಚಿವರೂ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧು ಬಂಗಾರಪ್ಪ ಎಂದೂ ಬೆತ್ತಲೆ ಜಗತ್ತು
ಪ್ರಚಾರಕ್ಕೆ ಸೀಮಿತವಾಯಿತೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ” ಜನ ಸ್ಪಂದನಾ ಸಭೆ
✍️ *ಓಂಕಾರ ಎಸ್. ವಿ. ತಾಳಗುಪ್ಪ*
Leave a Reply