Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರು ; ಹಗ್ಗ ಜಗ್ಗಾಟದಲ್ಲಿ ಮುಂಚೂಣಿಯಲ್ಲಿರುವ : ಸಿದ್ಧಿವಿನಾಯಕ ಬಿಲ್ಲವ ಮಹಿಳಾ ತಂಡ ಗೋಳಿಹೊಳೆ

ಬೈಂದೂರು : ನಿತ್ಯ ಕುಟುಂಬದ ಜಂಜಾಟದಲ್ಲಿ ಬ್ಯೂಸಿಯಾಗಿರುತ್ತಿದ್ದ ಮಹಿಳೆಯರು ಸ್ವಲ್ವ ಬಿಡುವು ಮಾಡಿಕೊಂಡ ಗೋಳೆಹೊಳೆ ಗ್ರಾಮ ವ್ಯಾಪ್ತಿಯ ಬಿಳಿಶಿಲೆ ಶ್ರೀ ವಿನಾಯಕ ಸನ್ನಿಧಾನದಲ್ಲಿ 2024 ಫೆಬ್ರವರಿ 03 ರಂದು ಬಿಳಿಶಿಲೆ ಶ್ರೀ ವಿನಾಯಕ ದೇವರಿಗೆ ಸಂಕಲ್ಪ ಮಾಡಿಕೊಂಡು, ವಿಶೇಷ ಪೂಜೆ ಸಲ್ಲಿಸಿ ಸಿದ್ಧಿವಿನಾಯಕ ಬಿಲ್ಲವ ಮಹಿಳಾ ತಂಡ ಗೋಳಿಹೊಳೆ ರಚನೆಗೊಂಡಿದೆ.

ಮಹಿಳೆಯರು ತಮ್ಮ ತಂಡ ಗೆಲ್ಲಲೇಬೇಕು ಎಂಬ ಛಲದಿಂದ ಪ್ರಥಮ ಬಾರಿಗೆ ಬೈಂದೂರು ತಾಲೂಕು ಬಿಲ್ಲವರ ಸಂಘ ವತಿಯಿಂದ ಬಿಲ್ಲವರ ಸಮ್ಮಿಲನ ಕಾರ್ಯಕ್ರಮದ ಹಗ್ಗ ಜಗ್ಗಾಟದಲ್ಲಿ ತೀವ್ರ ಪ್ರತಿರೋಧ ತೋರಿದವು, ಎರಡು ತಂಡಗಳು ತಮ್ಮ ಬೆಂಬಲಿಗರ ಕಿರುಚಾಟ, ಕೂಗಾಟ ಪ್ರೋತ್ಸಾಹದಿಂದಾಗಿ ಮತ್ತಷ್ಟು ಹುರುಪು ತುಂಬಿಕೊಂಡು ಶಕ್ತಿ ಮೀರಿ ಹಗ್ಗ ಎಳೆಯಲು ಮುಂದಾದರು. ಹಗ್ಗ ಕೆಲಮೊಮ್ಮೆ ಬಲಕ್ಕೆ ಸಾಗಿದರೆ, ಮಗದೊಮ್ಮೆ ಎಡಕ್ಕೆ ಸಾಗುತ್ತಿತ್ತು, ಹೊಸದಾದ ತಂಡದ ಮೇಲೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು.

ಬೈಂದೂರು ತಾಲೂಕು ಬಿಲ್ಲವರ ಸಂಘ ವತಿಯಿಂದ ಬಿಲ್ಲವರ ಸಮ್ಮಿಲನ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟದಲ್ಲಿ ತೃತೀಯ ಸ್ಥಾನ, ನಾಗಶಕ್ತಿ ಫ್ರೆಂಡ್ಸ್ ನಾಕಟ್ಟೆ ಬೈಂದೂರು ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ, ಮರವಂತೆ ಮಹಾಬೊಬ್ಬರ್ಯ ಫ್ರೆಂಡ್ಸ್ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, ಕುಂದಾಪುರ ಕಲಾಕ್ಷೇತ್ರ ಟ್ರಸ್ಟ್ ವತಿಯಿಂದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ, ಕುಂದಾಪ್ರ ಕನ್ನಡ ಸಂಸ್ಕøತಿ ಪ್ರತಿಷ್ಠಾನ ಬೈಂದೂರು ವತಿಯಿಂದ ಗಮ್ಮತ್ತು ಕಾರ್ಯಕ್ರಮದಲ್ಲಿ ನಡೆದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ, ಬೈಂದೂರು ದಸರಾ ಕ್ರೀಡಾ ಕೂಟದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ, ಬೈಂದೂರು ಉತ್ಸವ ಕ್ರೀಡಾ ಕೂಟದಲ್ಲಿ ಕೂಡಾ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರ ತಂಡದ್ದು.

ತಂಡ ರಚನೆ ಮಾಡುವಾಗ ಒಂದಿಷ್ಟು ಜನರ ಟೀಕೆ, ಟಿಪ್ಪಣಿಗಳು ಬಂದರು, ಅದನ್ನು ಲೆಕ್ಕಕ್ಕೆ ತಗೊಳ್ಳದೇ, ಹಿಡಿದ ಛಲವನ್ನು ಬಿಡದೆ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸಾಕಷ್ಟು ಟ್ರೋಫಿ ಪಡೆದ ಇವರು  ಟೀಕೆ, ಟಿಪ್ಪಣಿಗಳು ಮಾಡಿದವರಿಗೆ ಸರಿಯಾದ ಪ್ರತಿಫಲ ನೀಡಿದ್ದಾರೆ. ತಮ್ಮ ಊರಿನ ಹೆಸರನ್ನು ರಾಜ್ಯಮಟ್ಟಕ್ಕೆ ಪಸರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಆಶಿಸುತ್ತೇವೆ.

ಸಿದ್ಧಿವಿನಾಯಕ ಬಿಲ್ಲವ ಮಹಿಳಾ ತಂಡ ಗೋಳಿಹೊಳೆ, ತಂಡ ನಾಯಕಿ ಜ್ಯೋತಿ ಶಾಂತನಂದ ಪೂಜಾರಿ, ತಂಡದ ಸದಸ್ಯರಾದ ನೇತ್ರಾ ಸತೀಶ್ ಪೂಜಾರಿ, ವಿಶಾಲ ಪ್ರಭಾಕರ ಪೂಜಾರಿ, ನಾಗರತ್ನ ನಾಗರಾಜ್ ಪೂಜಾರಿ, ಮಂಜುಳಾ ಬಿ ಕುಮಾರ್ ಪೂಜಾರಿ, ನೇತ್ರಾ ಗೋಪಾಲ ಪೂಜಾರಿ, ಮಂಜುಳಾ ಜನಾರ್ದನ ಪೂಜಾರಿ, ಸುಜಾತ ಕೇಶವ ಪೂಜಾರಿ, ವಿದ್ಯಾ ಪ್ರಶಾಂತ್ ಪೂಜಾರಿ, ಗಂಗಿ ನಾರಾಯಣ ಪೂಜಾರಿ, ಧಾಕ್ಷಾಯಿಣಿ ರಾಘವೇಂದ್ರ ಪೂಜಾರಿ, ಹಾಗೂ ತಂಡದ ತರಬೇತುದಾರ : ಹರೀಶ್ ಪೂಜಾರಿ, ತಂಡದ ಮೆಂಟರ್ : ಮಂಜುನಾಥ ಪೂಜಾರಿ, ತಂಡಕ್ಕೆ ಸಹಕಾರ ಸಂತೋಷ್ ಪೂಜಾರಿ, ಸೋಮಶೇಖರ್ ಪೂಜಾರಿ, ಪರಮೇಶ್ವರ ಪೂಜಾರಿ, ಪ್ರಭಾಕರ ಪೂಜಾರಿ.

ವರದಿ : ಎಚ್. ಸುಶಾಂತ್ ಬೈಂದೂರು

Leave a Reply

Your email address will not be published. Required fields are marked *