Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟೇಶ್ವರ: ಉಚಿತ ಮಧುಮೇಹ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

ಕೋಟ: ಕಣ್ಣು ನಮ್ಮ ಅವಿಭಾಜ್ಯ ಅಂಗ. ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಈ ನೆಲೆಯಲ್ಲಿ ಪ್ರತಿದಿನ ನಮ್ಮ ಕಣ್ಣುಗಳನ್ನು ಸಾಧ್ಯವಾದಷ್ಟು ಪರಿಶುದ್ಧ ನೀರಿನಲ್ಲಿ ತೊಳೆಯಬೇಕು. ಕಣ್ಣಿನ ಉತ್ತಮ ಪೋಷಣೆಗಾಗಿ ತಾಜಾ ನೈಸರ್ಗಿಕ ತರಕಾರಿಗಳು ಹಾಗೂ ವಿಟಮಿನ್ ಅಂಶವುಳ್ಳ ಹಣ್ಣುಗಳನ್ನು ಸೇವಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಕಣ್ಣನ್ನು ಪರೀಕ್ಷಿಸುವುದು ಕಡ್ಡಾಯವಾಗಿಸಿಕೊಳ್ಳಿ. ಮಗು ಹುಟ್ಟಿದ 15 ದಿನದ ಬಳಿಕ ರೆಟಿನಾ ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಲೇ ಬೇಕು. ಪ್ರತಿಯೊಬ್ಬರು ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿದರೇ ಇನ್ನೊಬ್ಬರ ಬೆಳಕಿಗೆ ದಾರಿಯಾಗುತ್ತದೆ ಎಂದು ಅಸೋಸಿಯೇಷನ್ ಆಫ್ ಕಮ್ಯುನಿಟಿ ಭಾರತ ನೇತ್ರಶಾಸ್ತçಜ್ಞರ ಸಂಘದ ಪ್ರಧಾನ ಕರ‍್ಯದರ್ಶಿ ಡಾ.ಸ್ವಪನ್ ಸಮಂತ್ ಹೇಳಿದರು. 

ಅಸೋಸಿಯೇಷನ್ ಆಫ್ ಕಮ್ಯುನಿಟಿ ಭಾರತ ನೇತ್ರಶಾಸ್ತçಜ್ಞರ ಸಂಘ ದೃಷ್ಟಿ ರಥ ಯಾತ್ರ 2024, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಅಮೃತಧಾರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂದತ್ವ ನಿವಾರಣಾ ವಿಭಾಗ) ಉಡುಪಿ, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಕುಂದಾಪುರ, ರಾಷ್ಟಿçÃಯ ಸೇವಾ ಯೋಜನಾ ಘಟಕ 1 ಮತ್ತು 2 ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಜರುಗಿದ ಉಚಿತ ಮಧುಮೇಹ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತç ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಅಖಿಲ ಕರ್ನಾಟಕ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಈಗಾಗಲೇ ಸತತ 3 ದಿನಗಳಿಂದ ಕೋಟೇಶ್ವರದಲ್ಲಿ ದೇಶ ವಿದೇಶಗಳ 1500ಕ್ಕೂ ಮಿಕ್ಕಿ ನೇತ್ರತಜ್ಞ ವೈದ್ಯರಿಂದ ಮಹಾ ಸಮ್ಮೇಳನ ನಡೆಯುತ್ತಿದೆ. ಹೊಸ ಹೊಸ ಅಧ್ಯಯನಗಳು ಸೇರಿದಂತೆ ಹೊಸ ಹೊಸ ಅವಿಷ್ಕಾರಗಳನ್ನು ಹುಡುಕಿಕೊಂಡು ಹಲವು ವಿಚಾರಧಾರೆಗಳನ್ನು ಕಣ್ಣಿಗೆ ಸಂಬAಧಿಸಿದAತೆ ಸಂಪನ್ಮೂಲ ವ್ಯಕ್ತಿಗಳು ಮಂಡಿಸಿದ್ದಾರೆ. ಈ ಕರ‍್ಯಕ್ರಮದ ಅಂಗವಾಗಿ ಬಡಜನರಿಗೂ ಉಚಿತವಾಗಿ ಕಣ್ಣಿನ ಚಿಕಿತ್ಸೆಗಳು ಸಿಗಬೇಕು ಎನ್ನುವ ದೃಷ್ಟಿಯಿಂದ ನಮ್ಮ ಸಂಸ್ಥೆಯಿAದ ಈಗಾಗಲೇ ಹಲವು ಕಡೆ ಉಚಿತವಾಗಿ ಕಣ್ಣಿನ ತಪಾಸಣೆ ಜತೆಗೆ ಶಸ್ತç ಚಿಕಿತ್ಸೆಗಳನ್ನು ಮಾಡಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು. 

ಖ್ಯಾತ ನೇತ್ರ ತಜ್ಞರಾದ ಡಾ.ದಿವಾಕರ್, ಡಾ.ಶಶಿಧರ ಬಿ.ಸಿ, ಡಾ.ಸುಧಾರಾಣಿ, ಲಯನ್ಸ್ ಕ್ಲಬ್ ಅಮೃತಧಾರದ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್, ಮಾಜಿ ಅಧ್ಯಕ್ಷೆ ಸರಸ್ವತಿ ಪುತ್ರನ್ ಗೋಪಾಡಿ, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ರಾಮ್‌ರಾಯ ಆಚಾರ್ಯ,  ರಾಷ್ಟಿçÃಯ ಸೇವಾ ಯೋಜನಾಧಿಕಾರಿ ರೋಹಿಣಿ ಮತ್ತಿತರರು ಉಪಸ್ಥಿತರಿದ್ದರು. 
ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಮ್.ವಿ.ಆಚಾರ್ಯ ಕರ‍್ಯಕ್ರಮ ನಿರ್ವಹಿಸಿದರು. ಪಿಆರ್‌ಒ ಮೋಹನ್ ವಂದಿಸಿದರು.

ಅಸೋಸಿಯೇಷನ್ ಆಫ್ ಕಮ್ಯುನಿಟಿ ಭಾರತ ನೇತ್ರಶಾಸ್ತçಜ್ಞರ ಸಂಘದ ಪ್ರಧಾನ ಕರ‍್ಯದರ್ಶಿ ಡಾ.ಸ್ವಪನ್ ಸಮಂತ್ ಉಚಿತ ಮಧುಮೇಹ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತç ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿದರು. ಖ್ಯಾತ ನೇತ್ರ ತಜ್ಞರಾದ ಡಾ.ದಿವಾಕರ್, ಡಾ.ಶಶಿಧರ ಬಿ.ಸಿ, ಡಾ.ಸುಧಾರಾಣಿ, ಲಯನ್ಸ್ ಕ್ಲಬ್ ಅಮೃತಧಾರದ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್, ಮಾಜಿ ಅಧ್ಯಕ್ಷೆ ಸರಸ್ವತಿ ಪುತ್ರನ್ ಗೋಪಾಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *