ಕೋಟ: ಇಲ್ಲಿನ ಪುರಾತನ ಇತಿಹಾಸವಿರುವ ಹಂಗಾರಕಟ್ಟೆ ಬಾಳೇಕುದ್ರು ಶ್ರೀ ಮಠದ ಶಿಷ್ಯ ಸ್ವೀಕಾರ ಕಾರ್ಯಕ್ರಮ ನ.25ರಂದು ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರರಣದಲ್ಲಿ ಜರಗಿತು. ಶ್ರೀಂಗೇರಿ ಯತಿದ್ವಯರ ಪರಿಪೂರ್ಣ ಆಶ್ರೀವಾದವನ್ನು ನೂತನ ಯತಿವರ್ಯರಾದ ವಾಸುದೇವ ಸದಾಶಿವಾಶ್ರಮ ಶ್ರೀಪಾದಂಗಳರವರು ಸ್ಮರಿಸಿವುದರೊಂದಿಗೆ ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಶ್ರೀಗಳು ವಿವಿಧ ಧಾರ್ಮಿಕ ವಿಧಿವಿಧಾನಗಳ ನಡುವೆ ಪೀಠಾರೋಹಣ ನೆರವೆರಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಕೈಂಕರ್ಯವನ್ನು ಶ್ರೀ ಮಠದ ಪುರೋಹಿತ್ಯರಾದ ತೀರ್ಥಬೈಲು ರಾಮಕೃಷ್ಣ ಅಡಿಗ ಮತ್ತು ಸಿಬ್ಬಂದಿವರ್ಗ ನೆರವೆರಿಸಿದರು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕಂಚಿ ಶ್ರೀಗಳು ಕಾಮಾಕ್ಷಿ ದೇವರ ಪ್ರಸಾದವನ್ನು ಕಳುಹಿಸಿ ಆಶ್ರೀವಾದಿಸಿದರು.
ಇದೇ ವೇಳೆ ಹರಿಹರಪುರ ಶ್ರೀಪೀಠಾಧಿಪತಿಗಳು, ತಲಕಾಡು ಶ್ರೀಗಳು, ಬೆಂಗಳೂರಿನ ಕೈಲಾಶ್ರಮ ಶ್ರೀಗಳು ಉಪಸ್ಥಿತಿ, ಶ್ರೀ ಮಠದ ಶಿಷ್ಯ ಸಮೂಹ, ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಾಳೇಕುದ್ರು ಶ್ರೀ ಮಠ ಶಿಷ್ಯ ಸ್ವೀಕಾರ ಕಾರ್ಯಕ್ರಮ ಜರಗಿತು. ವೇಳೆ ಹರಿಹರಪುರ ಶ್ರೀಪೀಠಾಧಿಪತಿಗಳು , ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಶ್ರೀಗಳು, ತಲಕಾಡು ಶ್ರೀಗಳು, ಬೆಂಗಳೂರಿನ ಕೈಲಾಶ್ರಮ ಶ್ರೀಗಳು ಉಪಸ್ಥಿತಿ, ಶ್ರೀ ಮಠದ ಶಿಷ್ಯ ಸಮೂಹ,ಮತ್ತಿತರರು ಉಪಸ್ಥಿತರಿದ್ದರು.














Leave a Reply