Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಡಮಾನರಹಿತ ಕೃಷಿ ಸಾಲದ ಮಿತಿ 2 ರೂ. ಲಕ್ಷಕ್ಕೆ ಏರಿಕೆ; ಆರ್‌ ಬಿಐ ಮಹತ್ವದ ತೀರ್ಮಾನ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು 2 ಲಕ್ಷ ರೂ.ಗೆ ಏರಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಸಭೆಯಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸದ್ಯ ಅಡಮಾನ ರಹಿತ ಕೃಷಿ ಸಾಲದ ಮಿತಿ 1.6 ಲಕ್ಷ ರೂ ಇದ್ದು, ಇದನ್ನು 2 ಲಕ್ಷ ರೂಗೆ ಏರಿಸಲಾಗಿದೆ. ಒಬ್ಬ ವ್ಯಕ್ತಿ ಯಾವುದೇ ಅಡಮಾನ ಇಡುವ ಅಗತ್ಯ ಇಲ್ಲದೇ 2 ಲಕ್ಷ ರೂವರೆಗೆ ಕೃಷಿ ಸಾಲ ಪಡೆಯಲು ಅವಕಾಶ ಲಭ್ಯವಾಗುತ್ತದೆ. ಆರ್ಬಿಐನ ಈ ನಿರ್ಧಾರವು ಸಣ್ಣ ರೈತರಿಗೆ ಅನುಕೂಲವಾಗಲಿದ್ದು, ಹೆಚ್ಚು ಸಾಲ ಪಡೆದು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ.

2019ರಲ್ಲಿ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಅಲ್ಲಿಂದೀಚೆಗೆ ಪರಿಷ್ಕರಿಸಲಾಗಿರಲಿಲ್ಲ. ಕೃಷಿ ವೆಚ್ಚದಲ್ಲಿ ಏರಿಕೆ ಆಗಿರುವುದು ಹಾಗು ಒಟ್ಟಾರೆ ಹಣದುಬ್ಬರ ಹೆಚ್ಚಳ ಆಗಿರುವುದನ್ನು ಪರಿಗಣಿಸಿ, ಅಡಮಾನರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲು ನಿರ್ಧರಿಸಲಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಸಾಲದ ಅವಕಾಶ ಸಿಗುತ್ತದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *