ಕೋಟ: ನಿರಂತರವಾದ ಪ್ರಯತ್ನ, ಏಕಾಗ್ರತೆಯಿಂದ ಅಸಾಧ್ಯವಾದುದು ಯಾವುದೂ ಇಲ್ಲ. ಜ್ಞಾನ ಸಾಧನೆಯೇ ವಿದ್ಯೆಯ ಮಹತ್ತರ ಗುರಿ, ಜ್ಞಾನದ ಹಂಬಲಕ್ಕಾಗಿ ತುಡಿತವನ್ನು ಬೆಳೆಸಿಕೊಳ್ಳಬೇಕಾಗಿದೆ. ಕಠಿಣ ಪರಿಶ್ರಮದಿಂದ ಯಶಸ್ಸು ಶತಸಿದ್ಧ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕರಾದ ಸದಾನಂದ ಹೊಳ್ಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕೋಟ ವಿದ್ಯಾಸಂಘ ಪ್ರವರ್ತಿತ ವಿವೇಕ ಬಾಲಕಿಯರ ಪ್ರೌಢಶಾಲೆ ಮತ್ತು ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅಭ್ಯಾಗತರಾದ ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ನಾಗರತ್ನ ಜಿ. ಮತ್ತು ರಾಕೇಶ್ಶಿವಕುಮಾರ್ ತಮ್ಮ ಶಾಲಾ ದಿನಗಳನ್ನು ನೆನಪಿಸಿ ಸಾಧನೆಯ ದಾರಿಯಲ್ಲಿ ನೆರವಾದವರನ್ನು ಸ್ಮರಿಸಿಕೊಂಡರು.

ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಘದ ಕಾರ್ಯುದರ್ಶಿ ಎಂ. ರಾಮದೇವ ಐತಾಳ್, ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ, ಹಿರಿಯ ಶಿಕ್ಷಕರಾದ ವೆಂಕಟೇಶ ಉಡುಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಜ್ಞಾ ಆಚಾರ್, ಸಾತ್ವಿಕ್ ನಕ್ಷತ್ರಿ ವರದಿ ವಾಚಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ಸ್ವಾಗತಿಸಿದರೆ, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೀತಿರೇಖಾ ವಂದಿಸಿದರು. ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.
ಕೋಟ ವಿದ್ಯಾಸಂಘ ಪ್ರವರ್ತಿತ ವಿವೇಕ ಬಾಲಕಿಯರ ಪ್ರೌಢಶಾಲೆ ಮತ್ತು ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕರಾದ ಸದಾನಂದ ಹೊಳ್ಳ, ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ನಾಗರತ್ನ ಜಿ. ಮತ್ತು ರಾಕೇಶ್ಶಿವಕುಮಾರ್ ಇವರುಗಳನ್ನು ಅಭಿನಂದಿಸಲಾಯಿತು. ವಿವೇಕ ವಿದ್ಯಾಸಂಘದ ಅಧ್ಯಕ್ಷÀ ಸಿ.ಎ. ಪ್ರಭಾಕರ ಮಯ್ಯ, ವಿದ್ಯಾಸಂಘದ ಕಾರ್ಯುದರ್ಶಿ ಎಂ. ರಾಮದೇವ ಐತಾಳ್, ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ಮತ್ತಿತರರು ಇದ್ದರು.















Leave a Reply