Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೂಡುಗಿಳಿಯಾರು – ಆಂಗ್ಲ ವ್ಯಾಮೂಹ ಬಿಡಿ,ಸರಕಾರಿ ಶಾಲೆಗತ್ತ ಚಿತ್ತ ಹರಿಸಿ -ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೋಟ: ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಮೂಡುಗಿಳಿಯಾರು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಜರಗಿತು. ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು,ಆದರೆ ಪ್ರಸ್ತುತ ದಿನಗಳಲ್ಲಿ ಪೋಷಕರಿಗೆ ಆಂಗ್ಲ ಮಾಧ್ಯಮದ ವ್ಯಾಮೂಹದಿಂದ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವುದಕ್ಕೆ ಬೇಸರ ಹೊರಹಾಕಿದ ಶಾಸಕರು ಕನ್ನಡ ಮಾಧ್ಯಮದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ ಅದಕ್ಕೆ ವಾರ್ಷಿಕೋತ್ಸವ ಕಾರ್ಯಕ್ರಮಗಳು ವೇದಿಕೆ ಕಲ್ಪಿಸಲಿದೆ,ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ,ಇಲ್ಲಿನ ಮಕ್ಕಳಲ್ಲಿ ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾಗಿ ಬೆಳೆದು ನಿಂತಿದೆ ಎಂದರು.

ಇದೇ ವೇಳೆ ಇತ್ತೀಚಿಗೆ ನಿವೃತ್ತರಾದ ಶಾಲಾ ಮುಖ್ಯ ಶಿಕ್ಷಕ ರಮೇಶ್ ಇವರನ್ನು ಸನ್ಮಾನಿಸಲಾಯಿತು.ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ  ಪ್ರಜ್ವಲ್, ಸಲ್ಮಾನ್, ಪ್ರಜ್ಞಾ, ವಿಶಾಕ, ಮರ್ವಾನ್, ನೂತನ್,ನಿಧಿ, ಅನನ್ಯ, ಮನ್ವಿತಾ ಜೋಗಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕ್ರೀಡಾ ಸಾಮಾಗ್ರಿಗಳನ್ನು ಕ್ಲಬ್  ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಶಾಲೆಗೆ ಹಸ್ತಾಂತರಿಸಿದರು. ಕ್ರೀಡಾ ಮತ್ತು ಸಾಂಸ್ಕöÈತಿಕ ಸ್ಪರ್ಧೆಯಲ್ಲಿ ವಿಜೇತರಾದ ಬಹುಮಾನ ವಿತರಣೆ, ಕಲಿಕಾ ಸಾಧನಗೈದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಕೋಟ  ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ.ಬಿ.ಶೆಟ್ಟಿ,ಸದಸ್ಯರಾದ ಶೇಖರ್ ಜಿ, ಯೋಗೇಂದ್ರ ಪೂಜಾರಿ ಮಾಜಿ ತಾ.ಪಂ ಸದಸ್ಯರಾದ ಭರತ್ ಕುಮಾರ್ ಶೆಟ್ಟಿ,ಕೋಟ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ,ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ,ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಸಂತಿ, ಫ್ರೌಡಶಾಲಾ ಮುಖ್ಯ ಶಿಕ್ಷಕ ಜೂಲಿಯಟ್ ಕ್ರಾಸ್ತಾ ಉಪಸ್ಥಿತರಿದ್ದರು. ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ  ವೆಂಕಟೇಶ ಅಡಿಗ ಸ್ವಾಗತಿಸಿದರು.ಶಿಕ್ಷಕ ವಿಜಯ ನಿರೂಪಿಸಿದರು.ದೈಹಿಕ ಶಿಕ್ಷಕ ಶೇಖರ್ ವಂದಿಸಿದರು.

ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಮೂಡುಗಿಳಿಯಾರು ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಅಭ್ಯಾಗತರಾಗಿ ಕೋಟ  ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ.ಬಿ.ಶೆಟ್ಟಿ,ಸದಸ್ಯರಾದ ಶೇಖರ್ ಜಿ, ಯೋಗೇಂದ್ರ ಪೂಜಾರಿಮಾಜಿ ತಾ.ಪಂ ಸದಸ್ಯರಾದ ಭರತ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಕೋಟ.ಡಿ.7 ಮೂಡುಗಿಳಿಯಾರು.

Leave a Reply

Your email address will not be published. Required fields are marked *