ಕೋಟ: ಡಾ.ಕೋಟ ಶಿವರಾಮ ಕಾರಂತರ 27ನೇ ಸ್ಮತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಹಾಗೂ ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತರ 27ನೇ ಸ್ಮತಿ ದಿನಾಚರಣೆ ಕಾರ್ಯಕ್ರಮ ಸಾಲಿಗ್ರಾಮದ ಚಿತ್ರಶಾಲೆ ಮಾನಸ ಇಲ್ಲಿ ಆಚರಿಸಲಾಯಿತು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ಸೀತಾರಾಮ ಸೋಮಯಾಜಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಕಾರಂತರ ಭಾವಚಿತ್ರಕ್ಕೆ ಪುಷ್ಭ ನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಬಿ. ಎಂ ಗುರುರಾಜ ರಾವ್ ಸ್ವಾಗತಿಸಿ, ಶಿವರಾಮ ಕಾರಂತರ ನೆನಪುಗಳು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆಎಲ್ಲರೂ ಶ್ರಮ ವಹಿಸಬೇಕು ಎಂದರು.

ಸಮಾರoಭದ ಮುಖ್ಯ ಅತಿಥಿಯಾಗಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಕಾರಂತರ ಸಮಾಜಮುಖಿ ಕಾಳಜಿ ಹಾಗೂ ಬಹು ಮುಖ ಪ್ರತಿಭೆಯನ್ನು ಶ್ಲಾಘಿಸಿ ಕಾರಂತರ ನೇರ ನುಡಿಯ ಬಗ್ಗೆ ಕೆಲವು ನೆನಪುಗಳನ್ನು ಹಂಚಿ ಕೊಂಡರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ಪಂಜು ಪೂಜಾರಿ, ಉದ್ಯಮಿ ಸಂದೀಪ್ ಶೆಟ್ಟಿ, ಕೆ. ಜಗದೀಶ ಆಚಾರ್ಯ, ಕೆ .ರಘ ಭಂಡಾರಿ, ಕೆ. ಶ್ರೀಪತಿ ಆಚಾರ್ಯ,ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಕೋಟ ಇದರ ಕಾರ್ಯದರ್ಶಿ ಸುಧಾಕರ.ಪಿ, ಸಾಲಿಗ್ರಾಮ ಪಂ.ಪ ಸದಸ್ಯ ಕೆ.ಸಂಜೀವ ದೇವಾಡಿಗ,ಸಿಬ್ಬಂದಿ ಸಂಗೀತಾ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಹಾಗೂ ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತರ 27ನೇ ಸ್ಮತಿ ದಿನಾಚರಣೆ ಆಚರಿಸಲಾಯಿತು. ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ಸೀತಾರಾಮ ಸೋಮಯಾಜಿ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ,ಸಂಸ್ಥೆಯ ಅಧ್ಯಕ್ಷ ಬಿ. ಎಂ ಗುರುರಾಜ ರಾವ್ ಮತ್ತಿತರರು ಇದ್ದರು.















Leave a Reply