ಕೋಟ: ಯಕ್ಷಗಾನ ಅರ್ಥದಾರಿಗಳನ್ನು ರಂಗದಲ್ಲಿ ಬೆಳೆಸುವ ಪರಿಪಾಠ ಹಿಂದಿನಿoದಲೂ ಇತ್ತು. ಆದರೆ ಇತ್ತೀಚೆಗೆ ತೀರಾ ವಿರಳವಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೂ, ತಿಂಗಳಿಗೊoದರಂತೆ ಆಯೋಜಿಸಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದದ್ದು. ಅನೇಕಾನೇಕ ಅರ್ಥದಾರಿಗಳು ಈ ರಂಗದಲ್ಲಿ ಮೇಲೇಳಲಿ, ಇನ್ನೂ ಪ್ರಸಿದ್ಧ ಅರ್ಥದಾರಿಗಳೂ ಈ ಕೂಟದಲ್ಲಿ ಭಾಗವಹಿಸಿ, ಉದಯೋನ್ಮುಖ ಕಲಾವಿದರೊಡನೆ ಹಿರಿಯ ಕಲಾವಿದರ ರಂಗ ತಾಲೀಮು ನಡೆಯಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಾರೈಸಿ ಪ್ರಸಿದ್ಧ ಯಕ್ಷಗಾನ ಕಲಾವಿದ ಅರ್ಥದಾರಿ ವಾಸುದೇವ ರಂಗ ಭಟ್ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ ‘ಅರ್ಥಾಂಕುರ-10’ ಕಾರ್ಯಕ್ರಮವಾಗಿ ‘ಪಾದುಕಾ ಪ್ರದಾನ’ ತಾಳಮದ್ದಳೆ ಕಾರ್ಯಕ್ರಮವನ್ನು ಡಿ. 8ರಂದು ಉದ್ಘಾಟಿಸಿ, ರಂಗಭಟ್ ಮಾತನ್ನಾಡಿದರು. ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಮೂಡುಬಗೆ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಪಾದುಕಾ ಪ್ರದಾನ’ ರಂಗದಲ್ಲಿ ಪ್ರಸ್ತುತಿಗೊಂಡಿತು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ನೇತೃತ್ವದಲ್ಲಿ ‘ಅರ್ಥಾಂಕುರ-10’ ಕಾರ್ಯಕ್ರಮವಾಗಿ ‘ಪಾದುಕಾ ಪ್ರದಾನ’ ತಾಳಮದ್ದಳೆ ಕಾರ್ಯಕ್ರಮವನ್ನು .ಪ್ರಸಿದ್ಧ ಯಕ್ಷಗಾನ ಕಲಾವಿದ ಅರ್ಥದಾರಿ ವಾಸುದೇವ ರಂಗ ಭಟ್ ಡಿ. 8ರಂದು ಉದ್ಘಾಟಿಸಿ ಮಾತನ್ನಾಡಿದರು. ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಮೂಡುಬಗೆ, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.















Leave a Reply