
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ ಸಿಬ್ಬಂದಿಯಾಗಿ ಸುದೀರ್ಘ 40 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ವ್ಯವಸ್ಥಾಪಕರಾಗಿ ನಿವೃತ್ತರಾಗಿ, ಪ್ರಸ್ತುತ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ಜಿ. ರಾಜೀವ ದೇವಾಡಿಗರಿಗೆ ಸಂಘದ ವತಿಯಿಂದ ನುಡಿ ನಮನ ಕಾರ್ಯಕ್ರಮವು ಡಿ.14.ರ ಶನಿವಾರ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಆರಂಭದಲ್ಲಿ ದಿ. ಜಿ. ರಾಜೀವ ದೇವಾಡಿಗ ಇವರ ಭಾವಚಿತ್ರಕ್ಕೆ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್, ಸಂಘದ ಆಡಳಿತ ಮಂಡಲಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ನಿವೃತ್ತ ಸಿಬ್ಬಂದಿಯವರು ಮತ್ತು ಹಾಲಿ ಸಿಬ್ಬಂದಿಯವರು ಪುಷ್ಪನಮನ ಗೈದರು. ಇದೇ ಸಂದರ್ಭ ಮೃತರ ಗೌರವಾರ್ಥ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿಎ. ಎಸ್. ಎನ್. ಅಲ್ಸೆ ಮತ್ತು ಸಲಹಾ ಸಮಿತಿ ಸದಸ್ಯ ಕೆ. ತಾರಾನಾಥ ಹೊಳ್ಳ ಇವರು ಜಿ. ರಾಜೀವ ದೇವಾಡಿಗರ ವ್ಯಕ್ತಿತ್ವ, ಸಂಘಕ್ಕೆ ಸಲ್ಲಿಸಿದ ಸೇವೆ, ಕೃಷಿ, ಧಾರ್ಮಿಕ ಮತ್ತು ಇತರ ಕ್ಷೇತ್ರ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಸಲ್ಲಿಸಿದ ಸೇವೆ ಅತ್ಯುತ್ತಮವಾದುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ದಿ. ಜಿ. ರಾಜೀವ ದೇವಾಡಿಗರ ಆದರ್ಶ ನಮಗೆಲ್ಲರಿಗೂ ಮಾದರಿಯಾಗಿದ್ದು, ಸಂಸ್ಥೆಯ ಸಿಬ್ಬಂದಿಯವರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಡಾ| ಕೃಷ್ಣ ಕಾಂಚನ್ ತಿಳಿಸಿದರು.
ಸಂಘದ ನಿರ್ದೇಶಕರಾದ ಜಿ. ತಿಮ್ಮ ಪೂಜಾರಿ, ಕೆ. ಉದಯಕುಮಾರ ಶೆಟ್ಟಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ಎಚ್. ನಾಗರಾಜ ಹಂದೆ, ಪ್ರೇಮಾ ಎಸ್. ಪೂಜಾರಿ, ರಂಜಿತ್ ಕುಮಾರ್, ಭಾಸ್ಕರ ಶೆಟ್ಟಿ, ಅಚ್ಯುತ ಪೂಜಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಂಘದ ನಿರ್ದೇಶಕ ಟಿ. ಮಂಜುನಾಥ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ಇವರು ಕಾರ್ಯಕ್ರಮ ನಿರೂಪಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ಜಿ. ರಾಜೀವ ದೇವಾಡಿಗರಿಗೆ ಸಂಘದ ವತಿಯಿಂದ ನುಡಿ ನಮನ ಕಾರ್ಯಕ್ರಮವು ಸಂಘದ ಸಭಾಂಗಣದಲ್ಲಿ ಜರಗಿತು. ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್, ಸಂಘದ ಅಧ್ಯಕ್ಷರಾದ ಡಾ| ಕೃಷ್ಣ ಕಾಂಚನ್, ಸಂಘದ ನಿರ್ದೇಶಕರಾದ ಜಿ. ತಿಮ್ಮ ಪೂಜಾರಿ, ಕೆ. ಉದಯಕುಮಾರ ಶೆಟ್ಟಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ಎಚ್. ನಾಗರಾಜ ಹಂದೆ ಮತ್ತಿತರರು ಇದ್ದರು.













Leave a Reply