
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರವೂ *ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರ ಮತಕ್ಷೇತ್ರವಾಗಿದ್ದೂ, ಸರ್ಕಾರಿ ಶಾಲೆಗಳು ಶತಕ ವಸಂತ ಗತಿಸಿದರೂ ಇದುವರೆಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಸಂಭ್ರಮ ವಿಜೃಂಭಣೆಯೊಂದಿಗೆ ಶತಮಾನೋತ್ಸವ ಆಚರಣೆಯನ್ನೇ ಮರೆತಿರುವ ವಿರುದ್ಧ ಹಳೆಯ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ.
ಈಗಲಾದರೂ ಕುಂಭಕರ್ಣ ನಿದ್ರೆಯಲ್ಲಿರುವ ಶಿಕ್ಷಣ ಇಲಾಖೆಯ ಸೋಮಾರಿ ಅಧಿಕಾರಿಗಳು ನೂರು ವಸಂತ ಪೂರೈಸಿರುವ ಸರ್ಕಾರಿ ಶಾಲೆಗಳ ಪಟ್ಟಿ ಮಾಡಿ ಅಗತ್ಯ ಸೌಲಭ್ಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರೂ, ಸರ್ಕಾರದ ಕಾರ್ಯದರ್ಶಿಗಳಿಗೆ ಸಮುಚಿತ ಮಾರ್ಗದಲ್ಲಿ ಪತ್ರ ವ್ಯವಹಾರ ನೆಡೆಸಿ, ಶತಕ ಭಾರಿಸಿದ ಸರ್ಕಾರಿ ಶಾಲೆಗಳ ” ಶತಮಾನೋತ್ಸ” ವ ಕಾರ್ಯಕ್ರಮ ಅದ್ದೂರಿಯಾಗಿ ವಿಜೃಂಭಣೆ ಯಶಸ್ವಿಯಾಗಿ ನೆರವೇರಸಲು ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತರೂ ಮನವಿ ಮಾಡಿದ್ದಾರೆ.
✒️ ಓಂಕಾರ ಎಸ್. ವಿ. ತಾಳಗುಪ್ಪ

















Leave a Reply