
ಉಡುಪಿ: ಜಿಲ್ಲಾ ಆಸ್ಪತ್ರೆ ಇದು ಹೆಸರಿಗೆ ಮಾತ್ರ! ಆದರೆ ಇಲ್ಲಿನ ಬುದ್ಧಿವಂತ ವೈದ್ಯರು ಇಲ್ಲಿಗೆ ಬರುವ ಬಡ ರೋಗಿಗಳನ್ನು ಕಳುಹಿಸುತ್ತಿರುವುದು ಇನ್ನೊಂದು ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಗೆ ಎಂದರೆ ಇದು ಹಾಸ್ಯಾಸ್ಪದ ಅಲ್ಲವೇ?
ಹೌದು.ಇದು ನಿಜ ಜಿಲ್ಲೆಯ ಮೂಲೆ, ಮೂಲೆಗಳಿಂದ, ಆರೋಗ್ಯ ಕೇಂದ್ರಗಳಿಂದ , ತಾಲೂಕು ಆಸ್ಪತ್ರೆಗಳಿಂದ ರೋಗಿಗಳನ್ನು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಗೆ ರೆಫರ್ ಮಾಡಿ ಅಲ್ಲಿನ ವೈದ್ಯರು ಕಳುಹಿಸುತ್ತಾರೆ. ಆದರೆ ರೋಗಿಗಳನ್ನು ಈ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆತಂದಾಗ ಇಲ್ಲಿನ ವೈದ್ಯರುಗಳದ್ದು ಒಂದೇ ರಾಗ … ಇಲ್ಲಿ ವ್ಯವಸ್ಥೆಗಳಿಲ್ಲ, ದುಡ್ಡಿದ್ದರೆ ಮಣಿಪಾಲ ಹೋಗಿ, ಇಲ್ಲವಾದರೆ ಮಂಗಳೂರಿಗೆ ಹೋಗಿ ಎಂದು . ಹಾಗಾದರೆ ಈ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕೇಳಲು ಶಾಸಕರು, ಸಂಸದರು,ಸಚಿವರು ಯಾರೂ ಆಸಕ್ತರಿಲ್ಲವೇ?
ಶಾಸಕರು, ಸಚಿವರು ಈ ಆಸ್ಪತ್ರೆ ಗೆ ಕಾಲೇ ಇಡುತ್ತಿಲ್ಲ ಎಂಬುದರ ಲಾಭ ಪಡೆದು ಕೊಳ್ಳಲು ಈ ಆಸ್ಪತ್ರೆಯ ಜಿಲ್ಲಾ ಸರ್ಜನ್ ಹಾಗೂ ಅಧಿಕಾರಿಗಳು ಬಾಚಲು ಬಕಾಸುರರಂತೆ ಕೂತು ಬಿಟ್ಟಿದ್ದಾರೆ.
ಜಿಲ್ಲಾ ಸರ್ಜನ್ ವಸೂಲಿಗೆಂದೇ ತನ್ನ ಕಚೇರಿಯ ಹೊರಗೆ ಓರ್ವನನ್ನು ಅಕ್ರಮವಾಗಿ ನೇಮಿಸಿದ್ದು ಆತ ಸರ್ಜನರ ಸಹಿಗೆಂದು ಬರುವ ಸಾರ್ವಜನಿಕರಿಂದ ಸಹಿಯೊಂದಕ್ಕೆ 200 ರೂಪಾಯಿಯಂತೆ ಸಂಗ್ರಹಿಸಿ ಸಂಜೆ ಸರ್ಜನ್ ರ ಕಾರಿನಲ್ಲಿ ತಂದಿಡುತ್ತಾನೆ ಎನ್ನಲಾಗಿದೆ. ಸರ್ಜನ್ ರ ಸಹಿಯಿಂದ ಮೊದಲ್ಗೊಂಡು ಇನ್ನು ಯಾವ ಯಾವ ರೀತಿಯ ಅಕ್ರಮಗಳು ಈ ಜಿಲ್ಲಾ ಆಸ್ಪತ್ರೆ ಒಳಗೆ ನಡೆಯುತ್ತಿದೆ ಎಂಬ ಗುಟ್ಟನ್ನು ಈ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಈ ಆಸ್ಪತ್ರೆಯ ಐಸಿಯು ನಲ್ಲಿ ರುವ ಮಹಿಳಾ ನರ್ಸ್ ಗಳು ರೋಗಿಗಳ ಆರೈಕೆಯೇ ಮಾಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ದೂರಿ ಕೊಂಡಿದ್ದಾರೆ. ಗ್ಲುಕೋಸ್ ಖಾಲಿಯಾಗಿ ರಕ್ತ ವಾಪಾಸು ಬಂದು ಚೆಲ್ಲಿದರೂ ಈ ನರ್ಸ್ ಗಳು ಗಮನಿಸುವುದಿಲ್ಲ ಎಂದಿದ್ದಾರೆ.ಆದರೆ ಈ ಮಹಿಳಾ ನರ್ಸ್ ಗಳು ಖಾಸಗಿ ಆಂಬುಲೆನ್ಸ್ ಬೇಕೆ ನಾವು ಮಾಡಿ ಕೊಡುತ್ತೇವೆ ಎಂದು ತುಂಬಾ ಆಸಕ್ತಿ ಯಿಂದ ಕೇಳಿ ಕಮಿಷನ್ ಹಣಕ್ಕಾಗಿ ಖಾಸಗಿ ಆಂಬುಲೆನ್ಸ್ ಗಳನ್ನು ಕರೆಸಿ ಕಮಿಷನ್ ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಎಂದು ನೊಂದ ರೋಗಿಗಳ ಸಂಬಂಧಿಕರು ಹೇಳಿ ಕೊಂಡಿದ್ದಾರೆ.
ಯಥಾ ರಾಜ ತಥಾ ಪ್ರಜಾ ಎಂಬಂತೆ ಸರ್ಜನೇ ಭ್ರಷ್ಟಚಾರದಲ್ಲಿ ತೊಡಗಿರುವಾಗ ತಾವೇನು ಕಮ್ಮಿ ಎಂದು ಜಿಲ್ಲಾ ಆಸ್ಪತ್ರೆ ಯ ಆಡಳಿತ ಕಚೇರಿಯ ಸಿಬ್ಬಂದಿಗಳೆಲ್ಲರೂ ಬಾಯಿ ಬಿಟ್ಟು ಕೂತಿದ್ದಾರೆ ಎಂಬುದಕ್ಕೆ ಸಾಕ್ಷ್ ಜಿಲ್ಲಾ ಆಸ್ಪತ್ರೆ ಯ ಒಳಗೆ ತಲೆ ಎತ್ತಿರುವ ನಂದಿನಿ ಹಾಲಿನ ಬೂತ್. ಜಿಲ್ಲಾ ಆಸ್ಪತ್ರೆಯ ಒಳಗೆ ಯಾವುದೇ ವ್ಯವಹಾರ ನಡೆಸ ಬೇಕಾದರೆ ಬಹಿರಂಗ ಏಲಂ ಟೆಂಡರ್ ಕರೆದು ಕೊಡ ಬೇಕಾಗಿರುವುದು ನಿಯಮ . ಆದರೆ ಈ ಜಿಲ್ಲಾ ಆಸ್ಪತ್ರೆ ಯಲ್ಲಿ ಇದುವರೆಗೆ ಇರುವ ಅಕ್ರಮ ಅಂಗಡಿಗಳ ಪಟ್ಟಿಗೆ ಇನ್ನೊಂದು ನಂದಿನಿ ಹಾಲಿನ ಬೂತ್ ಸೇರ್ಪಡೆ ಯಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಆಸ್ಪತ್ರೆ ಕಟ್ಟಡ ಇನ್ನೂ ಪೂರ್ಣ ಗೊಂಡಿಲ್ಲ .ಅದಕ್ಕೂ ಮೊದಲೇ ಜಿಲ್ಲಾ ಸರ್ಜನ್ ರು ತಮ್ಮ ಆಪ್ತರೋರ್ವರಿಗೆ ಈ ನೂತನ ಕಟ್ಟಡದ ಆವರಣದೊಳಗೆ ತರಾತುರಿಯಲ್ಲಿ ಅಕ್ರಮವಾಗಿ ನಂದಿನಿ ಹಾಲಿನ ಬೂತನ್ನು ಇಡಲು ಅವಕಾಶ ಮಾಡಿ ಕೊಟ್ಟು ಅಧಿಕಾರದ ದುರುಪಯೋಗ ಮಾಡಿದ್ದಾರೆ. ಈ ನಂದಿನಿ ಹಾಲಿನ ಬೂತ್ ನಿಂದ ಪ್ರಾರಂಭಗೊಂಡು ಇನ್ನು ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಟೆಂಡರ್ ಕರೆಯದೆ ಇನ್ನೆಷ್ಟು ವ್ಯವಹಾರಗಳಿಗೆ ಅಕ್ರಮವಾಗಿ ಅನುಮತಿ ನೀಡಲು ಜಿಲ್ಲಾ ಸರ್ಜನ್ ರ ತಂಡ ಸಿದ್ಧತೆ ನಡೆಸಿದೆ ಎಂಬುದು ಮುಂದಿನ ದಿನಗಳಲ್ಲಿ ತನಿಖಾ ವರದಿಯನ್ನು ಪ್ರಕಟಿಸಲಾಗುವುದು,
ಇದೀಗ ನಡೆದಿರುವ ಅಕ್ರಮ ನಂದಿನಿ ಬೂತ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಕೂಡಲೇ ತಡೆಯಾಜ್ಞೆ ನೀಡಬೇಕು ಹಾಗೂ ಬಹಿರಂಗ ಏಲಂ ಮಾಡಿ ಈ ನಂದಿನಿ ಬೂತ್ ಅನ್ನು ಸರಕಾರವೇ ಬಾಡಿಗೆಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಆ ಮೂಲಕ ಈ ಜಿಲ್ಲಾ ಆಸ್ಪತ್ರೆಯ ಆಡಳಿತ ಕಚೇರಿಯ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Leave a Reply