
ಕೋಟ: ಮಕ್ಕಳಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಆಗಾಗ ಅರಿವು ಮೂಡಿಸುವ ಪಂಚವರ್ಣ ಮಹಿಳಾ ಮಂಡಲದ ಅರಿವು ಸರಣಿ ಕಾರ್ಯಕ್ರಮ ಶ್ಲಾಘನೀಯ ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು.
ಬುಧವಾರ ಕೋಟ ವಿವೇಕ ವಿದ್ಯಾಶಸಂಸ್ಥೆಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಅರಿವು ನಿಮ್ಮಗಿರಲಿ ನೆರವು 12ನೇ ಸರಣಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ಸಮಾಜದ ಬಗ್ಗೆ ತುಡಿಯುವ ಪಂಚವರ್ಣ ಸಂಸ್ಥೆಯ ಸಾಮಾಜಿಕ ಬದ್ಧತೆ ಇಡೀ ರಾಜ್ಯ ರಾಷ್ಟçಕ್ಕೆ ಮಾದರಿಯಾಗಿದೆ.
ತಿಂಗಳ ಪರ್ಯಂತ ಒಂದೇ ಕಾರ್ಯಕ್ರಮಗಳಲ್ಲದೆ ಹಲವು ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ಧಾರೆ ಎರೆಯುತ್ತಿದ್ದಾರೆ.ಇದರಲ್ಲಿ ಅರಿವು ನೀಡುವ ಮಕ್ಕಳಲ್ಲಿ ಜಾಗೃತಿ ಮೊಳಗಿಸುವ ಸರಣಿ ಕಾರ್ಯಕ್ರಮ ನಿತ್ಯನಿರಂರರವಾಗಿಸುವ ಯೋಚನಾಲಹರಿ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಇದೇ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಿದ್ಧ ಆಯುರ್ವೇದ ವೈದ್ಯೆ ಡಾ.ವಾಣಿಶ್ರೀ ಐತಾಳ್ ಪ್ರಸ್ತುತ ಮಕ್ಕಳಲ್ಲಿ ಉದ್ಭವಿಸುತ್ತಿರುವ ಆರೋಗ್ಯ ಸಮಸ್ಯೆ, ಮೊಬೈಲ್ ಗೀಳು,ಪೋಷಕರು ಮತ್ತು ಮಕ್ಕಳಲ್ಲಿ ಇರುವ ಸಂಬAಧಗಳ ಬಗ್ಗೆ ವಿಸ್ತöÈತವಾಗಿ ತಿಳಿಯಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.
ಸಭೆಯಲ್ಲಿ ಪಂಚವರ್ಣ ಯುವಕ ಮಂಡಲದ ನೂತನ ಉಪಾಧ್ಯಕ್ಷ ದಿನೇಶ್ ಆಚಾರ್ ಉಪಸ್ಥಿತರಿದ್ದರು. ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರಾಸ್ತಾವನೆ ಸಲ್ಲಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ವಂದಿಸಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಅರಿವು ನಿಮ್ಮಗಿರಲಿ ನೆರವು 12ನೇ ಸರಣಿ ಕಾರ್ಯಕ್ರಮವನ್ನು ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಿದ್ಧ ಆಯುರ್ವೇದ ವೈದ್ಯೆ ಡಾ.ವಾಣಿಶ್ರೀ ಐತಾಳ್, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಇದ್ದರು.














Leave a Reply