Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗಂದೂರು ಪ್ರವಾಸಿಗರ ವಾಹನ ನಿಲುಗಡೆ ಶುಲ್ಕ ವಸೂಲಿ ಅಕ್ರಮ – ನಕಲಿ ರಶೀದಿ ಪುಸ್ತಕ ಬಳಸಿ ಲಕ್ಷಾಂತರ ರೂ ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟ

ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗಂದೂರು ಪ್ರವಾಸಿಗರ ವಾಹನ ನಿಲುಗಡೆ ಶುಲ್ಕ ವಸೂಲಿ ಅಕ್ರಮ – ನಕಲಿ ರಶೀದಿ ಪುಸ್ತಕ ಬಳಸಿ ಲಕ್ಷಾಂತರ ರೂ ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟ – ಆರೋಪಿತ ಭ್ರಷ್ಟರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದ ಸಕ್ಷಮ ಶಿಸ್ತು ಪ್ರಾಧಿಕಾರಿಯಾದ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ವಿಚಾರಣೆ ತನಿಖೆ ಕಸದ ಬುಟ್ಟಿಗೆ.

ನಕಲಿ ರಶೀದಿ ಪುಸ್ತಕ ಬಳಸಿ ಸಿಗಂದೂರು ಲಾಂಚ್ ಬಳಿ ವಾಹನ ನಿಲುಗಡೆ ಶುಲ್ಕ ವಸೂಲಾತಿ ಲಕ್ಷಾಂತರ ರೂ ಅವ್ಯವಹಾರದಲ್ಲಿ ಭಾಗಿಯಾದ ಆರೋಪಿತ ಕಾರ್ಯದರ್ಶಿ (PDO ಹುದ್ದೆಯಲ್ಲಿ ಕರ್ತವ್ಯ ) ಇಮ್ತಿಯಾಜ್ ಭಾಷ ತಾಳಗುಪ್ಪ ಗ್ರಾಮ ಪಂಚಾಯಿತಿಗೆ ವಕ್ಕರಿಸಿದ್ದೆ ತುಘಲಕ್ ದರ್ಬಾರ್ ದುರಾಡಳಿತದ ಪರಮಾವಧಿ.

ತುಮರಿ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ *ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಗಂದೂರು ಲಾಂಚ್ ಸೌಲಭ್ಯವಿರುವ ಸನಿಹ ಪ್ರವಾಸಿಗರ ವಾಹನಗಳಿಗೆ ಶುಲ್ಕ ಪಡೆಯುವ ಭರದಲ್ಲಿ ಅಂದಿನ ಸಾಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಥಳೀಯರ ದೂರಿನ ಮೇರೆಗೆ ಗುಪ್ತವಾಗಿ ನಕಲಿ ರಶೀದಿ ಪುಸ್ತಕ ಬಳಸಿ ವಾಹನ ಮಾಲೀಕರಿಂದ ಶುಲ್ಕ ವಸೂಲಾತಿ ಮಾಡುತ್ತಿರುವ ಆರೋಪಗಳು ಸತ್ಯವಾಗಿದ್ದೂ, ನಕಲಿ ರಶೀದಿ ಪುಸ್ತಕಗಳನ್ನು ವಶ ಪಡಿಸಿಕೊಂಡಿದ್ದೂ ತನಿಖೆ ಸಹಿತ ವಿಚಾರಣೆ ನೆಡೆಯುತ್ತಿರುವ ವಿಷಯ ಜಗಜ್ಜಾಹಿರವಾಗಿದ್ದೂ ಇತಿಹಾಸ.

ನಕಲಿ ರಶೀದಿ ಬಳಸಿ ಲಕ್ಷಾಂತರ ರೂ ಅವ್ಯವಹಾರ ಪ್ರಕರಣ ನೆಡೆದು ಹಲವು ವಸಂತಗಳೇ ಉರುಳಿದರೂ ಶಿವಮೊಗ್ಗ ಜಿಲ್ಲಾಪಂಚಾಯತ್ ಸಕ್ಷಮ ಶಿಸ್ತು ಪ್ರಾಧಿಕಾರಿ & ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವ್ಯವಹಾರದಲ್ಲಿ ಸರ್ಕಾರದ ಭೋಕ್ಕಸಕ್ಕೆ ಲಕ್ಷಾಂತರ ರೂ ನಷ್ಟ ಉಂಟು ಮಾಡಿರುವ ಕಾರ್ಯದರ್ಶಿ (PDO ಆಗಿ ಕರ್ತವ್ಯ ನಿರ್ವಹಣೆ ) ಇಮ್ತಿಯಾಜ್ ಭಾಷ ಹಾಗೂ ಪ್ರಕರಣದಲ್ಲಿ ನೇರ ಭಾಗಿಯಾದವರ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕೆ ಮುಂದಾಗದ ಸರ್ಕಾರದ ವಿರುದ್ಧ  ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ನಗ್ನಸತ್ಯವಾಗಿದೆ.

✍🏻 ಓಂಕಾರ ಎಸ್. ವಿ. ತಾಳಗುಪ್ಪ

Leave a Reply

Your email address will not be published. Required fields are marked *