
ಕಾರ್ಕಳ : ನಿಟ್ಟೆ ರುಕ್ಕಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ರೋಹನ್ ರಮೇಶ್ ಸಾಲಿಯಾನ್ ಅವರಿಗೆ ಅಂತರಾಜ್ಯಮಟ್ಟದ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ.
ಇತ್ತೀಚೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ನಡೆಸಿದ 45ನೇ ಕರ್ನಾಟಕ ಅಂತರ ರಾಜ್ಯ ಪಾಲಿಟೆಕ್ನಿಕ್ ಅಥ್ಲೆಟಿಕ್ಸ್ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ 32 ಕ್ರೀಡಾಪಟುಗಳಲ್ಲಿ ರೋಹನ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರುನಿಟ್ಟೆ ಮಜಲು ಹೊಸಮನೆ ನಿವಾಸಿ ರಮೇಶ್ ಮತ್ತು ಜಯಶ್ರೀ ದಂಪತಿಯ ಪುತ್ರ.













Leave a Reply