
ಕೋಟ: ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಘಟಕದ ಸಾರಥ್ಯದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಸಹಕಾರದಲ್ಲಿ ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ 4ನೇ ದಿನದ ಸಾಂಸ್ಕöÈತಿಕ ಪರ್ವ ಸಂಭ್ರಮ ಸಾಲಿಗ್ರಾಮ -2025 ಕಾರ್ಯಕ್ರಮ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರ ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್.ಕಾರಂತ ಉದ್ಘಾಟಿಸಿ ಮಾಶತನಾಡಿ ಈ ಸಂಧರ್ಭ ದೇವಸ್ಥಾನದ ಉತ್ಸವ ಮತ್ತು ವಿಶೇಷ ಪೂಜಾ ಸಂದರ್ಭಗಳಲ್ಲಿ ಮೊಗವೀರರ ಪ್ರಧಾನ್ಯತೆಯನ್ನು ಡಾ. ಕೆ. ಎಸ್. ಕಾರಂತ್ ತಿಳಿಸಿದರು. ಸಭಾಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್ ವಹಿಸಿದ್ದರು. ಇದೇ ವೇಳೆ ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಬ್ರಹ್ಮ ರಥ ಕಟ್ಟುವ ಮತ್ತು ತಟ್ಟಿರಾಯ ಹೊತ್ತು, ಕುಣಿಯುತ್ತ ಸಾಗುವ ಪಡು-ಕೆಮ್ಮಣ್ಣು ಊರಿನ ಗ್ರಾಮಸಭೆಯ ಐವರನ್ನು ಸಾಂಕೇತಿಕವಾಗಿ ಗುರುತಿಸಿ, ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಜಯಂತ ಅಮೀನ್, ಮಾಜಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಶಿವರಾಮ ಕೆ. ಎಮ್, ಉಪಾಧ್ಯಕ್ಷ ರವೀಶ್ ಎಸ್. ಕೊರವಡಿ,ಬಾರಕೂರು ಮೊಗವೀರ ಸಂಯುಕ್ತಸಭಾ ಉಪಾಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಕರಾವಳಿ ಮೊಗವೀರ ಸಭಾಭವನ ಗುಂಡ್ಮಿ ಇದರ ಕಾರ್ಯದರ್ಶಿ ಚಂದ್ರ ಬಂಗೇರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಶ್ರೀನಿವಾಸ ಅಮೀನ್, ಮೊಗವೀರ ಯುವ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್ ಉಪಸ್ಥಿತರಿದ್ದರು.
ಚಂದ್ರ ಬಂಗೇರ ಸ್ವಾಗತಿಸಿ, ಕೃಷ್ಣಮೂರ್ತಿ ಮರಕಾಲ ವಂದಿಸಿದರು. ರಾಜು ಪಾರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.ನೃತ್ಯ ಸ್ಪರ್ಧೆಯಲ್ಲಿ ಹಲವಾರು ರಾಜ್ಯಪ್ರಶಸ್ತಿ ಪಡೆದ ಮಂಜಿತ್ ಶೆಟ್ಟಿ ಸಾರಥ್ಯದ ಜಿಲ್ಲೆಯ ಹೆಸರಾಂತ ತಂಡಗಳಿAದ ಹಾಗೂ ಕುಮಾರಿ ಪ್ರಜ್ಞಾ ರಾವ್ ಕಟೀಲು ಇವರಿಂದ ನೃತ್ಯ-ಗಾನ ವೈವಿದ್ಯ ನಡೆಯಿತು.ನೃತ್ಯ -ಗಾನ ವೈವಿಧ್ಯವನ್ನು ವಿಜೇತ ಶೆಟ್ಟಿ ನಿರೂಪಿಸಿದರು.
ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಘಟಕದ ಸಾರಥ್ಯದಲ್ಲಿ ಸಂಭ್ರಮ ಸಾಂಸ್ಕೃತಿಕ ಸಂಭ್ರಮ ಸಾಲಿಗ್ರಾಮ ಕಾರ್ಯಕ್ರಮದಲ್ಲಿ ಬ್ರಹ್ಮ ರಥ ಕಟ್ಟುವ ಮತ್ತು ತಟ್ಟಿರಾಯ ಹೊತ್ತು, ಕುಣಿಯುತ್ತ ಸಾಗುವ ಪಡು-ಕೆಮ್ಮಣ್ಣು ಊರಿನ ಗ್ರಾಮಸಭೆಯ ಐವರನ್ನು ಸಾಂಕೇತಿಕವಾಗಿ ಗುರುತಿಸಿ, ಗೌರವಿಸಲಾಯಿತು.














Leave a Reply