Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

*“ಓಂ ನವ ನರಸಿಂಹ” ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ*

ಬೆಂಗಳೂರು, ಜ, 28; “ಓಂ ನವ ನರಸಿಂಹ” ಎಂಬ ಇಂಗ್ಲಿಷ್ ಭಕ್ತಿಗೀತೆಯನ್ನು ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಇಂಗ್ಲಿಷ್‌ನಲ್ಲಿ ಬಿಡುಗಡೆಯಾದ ನರಸಿಂಹ ಸರಣಿಯ ಹಾಡುಗಳಲ್ಲಿ ಪ್ರಪಂಚದಲ್ಲೇ ಇದು ಮೊದಲನೆಯದು ಎಂಬುದು ವಿಶೇಷವಾಗಿದೆ.
ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರ್ಮಾಪಕರಾದ  ಪಿ. ಕೃಷ್ಣ ಪ್ರಸಾದ್ ಸಾರಥ್ಯದಲ್ಲಿ ಈ ಗೀತೆ ಮೂಡಿ ಬಂದಿದೆ.

ದರ್ಶನ್ ನಾರಾಯಣ್ ಅವರ ಹಿನ್ನೆಲೆ ಗಾಯನವಿರುವ ಈ ಗೀತೆಯಲ್ಲಿ ಸ್ವಸ್ತಿಕ್ ಕಾರೇಕಡ್ ಅವರ ಸಂಗೀತ ಮತ್ತು ಶ್ರೇಯಸ್ ಎ ಪಿ ಅವರ ಸಾಹಿತ್ಯವಿದೆ. ಜೀವನ್ ನಿರ್ದೇಶನದ ಈ ಇಂಗ್ಲೀಷ್ ಭಕ್ತಿ ಗೀತೆಗೆ ಛಾಯಾಗ್ರಹಣ ಮತ್ತು ಸಂಕಲನ ಸುನಿಲ್ ಕುಮಾರ್ ರಾಜು ಅವರದ್ದು. ಸ್ಯಾನ್ ವಿ ಅವರ ತನ್ಮಯಗೊಳಿಸುವ ನೃತ್ಯ ನಿರ್ದೇಶನವಿದೆ. ಮಲ್ಲಿಕಾ ಕ್ಯಾಸೆಟ್ಸ್ ನಿಂದ ನಿರ್ಮಾಣದ ಈ ಗೀತೆಯನ್ನು ಕೋಲಾರದಲ್ಲಿ ಚಿತ್ರಿಸಲಾಗಿದೆ.

ನಾಟ್ಯಂ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ವಿದ್ಯಾರ್ಥಿಗಳ ನೃತ್ಯ ಗಮನಾರ್ಹವಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ನರಸಿಂಹ ಸ್ವಾಮಿಗೆ ಇದು ಗೌರವವಾಗಿದೆ. ಎಲ್ಲಾ ವಯಸ್ಸಿನ ಜನರಿಗೆ ಆಕರ್ಷಕವಾಗುವಂತಹ ಸುಂದರ ಮತ್ತು ಭಕ್ತಿಪರವಾದ ಹಾಡು ಇದಾಗಿದೆ.

Leave a Reply

Your email address will not be published. Required fields are marked *