Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರ್ಕಾರಿ ನೌಕರರಿಂದ ಇಲಾಖೆಗಳ ದುರುಪಯೋಗ; ಉಡುಪಿಯಲ್ಲಿ ತಮ್ಮವರಿಗಾಗಿ ಸರ್ಕಾರಿ ಕಟ್ಟಡವನ್ನೇ ಹೋಟೆಲ್ ಮಾಡಿ ದುರ್ಬಳಕೆ

ಉಡುಪಿ (ಹೊಸಕಿರಣ) : ಇಲ್ಲಿನ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಗೆ ತಾಗಿಕೊಂಡಿರುವ ಶವಾಗಾರದ ಕಟ್ಟಡಕ್ಕೆ ತಾಗಿಕೊಂಡು ಸಾರಥಿ ಭವನ ಎಂಬ ಕಟ್ಟಡವಿದ್ದು ಈ ಕಟ್ಟಡ ಯಾವ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರಾಗಿದೆಯೋ ಆ ಉದ್ದೇಶಕ್ಕೆ ಬಳಕೆಯಾಗದೆ ಇದೀಗ ಸರ್ಕಾರಿ ನೌಕರನೋರ್ವನ ಖಾಸಗಿ ಹೋಟೆಲ್ ಆಗಿ ಪರಿವರ್ತನೆ ಯಾಗಿದೆ ಎನ್ನಲಾಗಿದೆ.

ಈ ನಾನ್ ವೆಜ್ ಹೋಟೆಲ್ ಗೆ ನಗರಸಭೆಯಿಂದ, ಆಹಾರ ಇಲಾಖೆಯಿಂದ ಅನುಮತಿ ಇದೆಯೋ? ವಾಣಿಜ್ಯ ನೀರಿನ ಸಂಪರ್ಕ, ಪ್ರತ್ಯೇಕ ವಾಣಿಜ್ಯ ವಿದ್ಯುತ್ ಸಂಪರ್ಕ ಪಡೆಯಲಾಗಿದೆಯೋ ಅಥವಾ ಎಲ್ಲಾ ಅಕ್ರಮವೋ? ಎಂದು ಇನ್ನಷ್ಟೇ ತನಿಖೆಯಾಗಬೇಕಿದೆ.

ಇಷ್ಟೂ ಅಲ್ಲದೆ ಶಾಲಾ ಕಾಲೇಜಿನ ಸಾವಿರಾರು ಮಕ್ಕಳು ಸಂಚರಿಸುವ ರಸ್ತೆಗೆ ತಡೆ ಒಡ್ಡಿ ಅನಧಿಕ್ರತ ದೊಡ್ಡ ಬೋರ್ಡ್ ನೆಟ್ಟು ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ರಸ್ತೆಗೆ ಅನಧಿಕೃತ ಬೋರ್ಡ್ ಹಾಕಿ ವಿದ್ಯುತ್ ಕನೆಕ್ಷನ್ ನೀಡಿರುವುದು ಅಪಾಯಕಾರಿಯಾಗಿದೆ ಹಾಗೂ ಈ ಬೋರ್ಡ್ ನಿಂದಾಗಿ ಮಕ್ಕಳಿಗೆ ವಾಹನ ಅಪಘಾತ ಗಳಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು ಇಂತಹ ಅಕ್ರಮಗಳ ಬಗ್ಗೆ ಕೂಡಲೇ ತನಿಖೆ ನಡೆಸಿ ಅಧಿಕಾರ ದುರ್ಬಳಕೆ ಮಾಡಿಕೊಂಡವರನ್ನು ಈ ಅಕ್ರಮದಲ್ಲಿ ಶಾಮೀಲಾಗಿರುವ ನೌಕರರನ್ನು ಸೇವೆಯಿಂದ ವಜಾ ಮಾಡಬೇಕು, ಇನ್ನು ಮುಂದೆ ಸರ್ಕಾರಿ ಯಂತ್ರದ ದುರ್ಬಳಕೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *