
ಕಸಬಾ ಹೋಬಳಿಯ ಮರಸ ಸರ್ಕಾರಿ ಭೂಮಿ ಅಕ್ರಮ ಭೂಕಳ್ಳರ ಮಾಫಿಯಾದವರ ಪಾಲು – ಕಂದಾಯ ಇಲಾಖೆಯ ಕಡು ಭ್ರಷ್ಟ ರಾಜಸ್ವ ನಿರೀಕ್ಷಕ ಗುರುರಾಜ್ ಭೂ ಕಳ್ಳರ ಎಂಜಲು ಕಾಸಿಗೆ ಕರ್ತವ್ಯ ಲೋಪ ಗಂಭೀರ ಆರೋಪ – ಕಣ್ಮುಚ್ಚಿ ಕುಳಿತ ಶಿವಮೊಗ್ಗ ಜಿಲ್ಲಾಧಿಕಾರಿ ಗುರು ದತ್ತ ಹೆಗಡೆ
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಸಬಾ ಹೋಬಳಿಯ ಮರಸ ಗ್ರಾಮ ಸಾಗರ ನಗರಕ್ಕೆ ತಾಗಿಕೊಂಡಂತೆ ಬೆಳೆಯುತ್ತಿರುವ ಗ್ರಾಮೀಣ ಪ್ರದೇಶ, ಕಂದಾಯ ಇಲಾಖೆಯ ಸರ್ಕಾರಿ ಭೂಮಿ ಮನಸೊಯೀಚ್ಛೆ ಭೂ ಕಳ್ಳರ ಮಾಫಿಯಾಕ್ಕೆ ಸರ್ಕಾರಿ ಭೂಮಿ ಪಾಲು ಆಗುತ್ತಿದ್ದರೂ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಿಕ ಗುರುರಾಜ್ ಭೂ ಕಳ್ಳರ ಜೊತೆ ಅಕ್ರಮ ಸಂಭಂದದೊಂದಿಗೆ ಭೂ ಕಳ್ಳರು ನೀಡುವ ಎಂಜಲು ಕಾಸಿಗೆ ಬಲಿಯಾಗಿ ಸರ್ಕಾರಿ ಭೂಮಿ ಸಂರಕ್ಷಣೆ ಮಾಡೋದು ಬಿಟ್ಟು ಕರ್ತವ್ಯನಿರತ ರಾಜಸ್ವ ನಿರೀಕ್ಷಿಕ ಗುರುರಾಜ್ ವಿರುದ್ಧ ಕರ್ತವ್ಯ ಲೋಪವೆಸಗುತ್ತಿರುವ ಗಂಭೀರ ಆರೋಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆತ್ತಲೆ ಜಗತ್ತು ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಕಂಡು ಬರುತ್ತಿದೆ.
ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿ ಗುರು ದತ್ತ ಹೆಗಡೆ ರವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಸಬಾ ಹೋಬಳಿಯ ಮರಸ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಭೂಮಿ ಸಂರಕ್ಷಣೆ ಮಾಡಿ, ಅಕ್ರಮವಾಗಿ ಭೂ ಮಾಫಿಯಾ ಭೂ ಕಳ್ಳರ ಜೊತೆ ಅಕ್ರಮವಾಗಿ ಅನೈತಿಕ ಸಂಬಂಧ ಸಹಿತ ಸರ್ಕಾರಿ ಕಂದಾಯ ಭೂಮಿ ಸಂರಕ್ಷಣೆಗೆ ವಿಫಲರಾಗುತ್ತಾ, ಭೂ ಕಳ್ಳರ ಎಂಜಲು ಕಾಸಿಗೆ ಕರ್ತವ್ಯ ಲೋಪವೆಸಗುತ್ತಿರುವ ರಾಜಸ್ವ ನಿರೀಕ್ಷಿಕ ಗುರುರಾಜ್ ವಿರುದ್ಧ ವಿಶೇಷ ನ್ಯಾಯಯುತ ತನಿಖೆ ನೆಡೆಸುವಂತೆ ಸ್ಥಳೀಯರು ಮನವಿ ಸಹಿತ ದೂರು ಸಲ್ಲಿಸುತ್ತಿದ್ದಾರೆ.
@ಸುದ್ದಿ : ಓಂಕಾರ ಎಸ್. ವಿ. ತಾಳಗುಪ್ಪ














Leave a Reply