Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಗೆಳೆಯರ ಬಳಗ ಕಾರ್ಕಡ 37ನೇ ವರ್ಷದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ

ಕೋಟ: ಸಂಘಟನೆಗಳ ನಿರಂತರ ಸಮಾಜಿಕ ಕಾರ್ಯ ಅಸಮಾನ್ಯವಾದದ್ದು ಈ ನಿಟ್ಟಿನಲ್ಲಿ ಗೆಳೆಯರ ಬಳಗ ಹಲವು ಸಾಮಾಜಮುಖಿ ಕಾರ್ಯಕ್ರಮಗಳು ಮನೆಮನಗಳನ್ನು ತಲುಪಿದೆ ಇದು ಅತ್ಯಂತ ಪ್ರಶಂನೀಯ ಎಂದು ಮುಂಬೈ ಓಎನ್‌ಜಿಸಿ  ಚೀಫ್ ನಿವೃತ್ತ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಹೇಳಿದರು
ಶನಿವಾರ ಕಾರ್ಕಡ ಶಾಲಾ ವಠಾರದಲ್ಲಿ  ಗೆಳೆಯರ ಬಳಗ  ಕಾರ್ಕಡ, ಸಾಲಿಗ್ರಾಮ  ಇದರ 37ನೇ ವಾರ್ಷಿಕೋತ್ಸವ, ಸನ್ಮಾನ, ದತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ, ಅಶಕ್ತರ ಮತ್ತು ವಿಕಲಚೇತನರ ಸಹಾಯ ನಿಧಿ ವಿತರಣಾ ಸಮಾರಂಭದಲ್ಲಿ ಮಾತನಾಡಿ ಸಾಧಕರನ್ನು ಗೌರವಿಸಿ ಕಾರ್ಯ ಮತ್ತಷ್ಟು ಸಾಮಾಜಿಕ ಸೇವೆಗೆ ಪ್ರೋತ್ಸಾಹಿಸಿದಂತೆ ಇಂಥಹ ಸಂಘಟನೆಗಳು ಸಮಾಜದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಯಕ್ಷಗುರು ಕೃಷ್ಣಮೂರ್ತಿ ಉರಾಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಎಂ ಜಯರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿಯ ಸದಸ್ಯ ಗಣೇಶ್ ನೆಲ್ಲಿಬೆಟ್ಟು, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ವಸಂತಿ ಅಚ್ಯುತ್ ಪೂಜಾರಿ, ಚಂದ್ರ ಪೂಜಾರಿ. ಪಿ. ಇವರುಗಳನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಸಾಧಕಿ ಶರ್ಮದಾ,ಶೌರ್ಯ ಪ್ರಶಸ್ತಿ ಪುರಸ್ಕöÈತ ಧೀರಜ್ ಐತಾಳ್,ಕರಾಟೆಯ ಸಾಧಕಿ ಸಂಹಿತ ಆಚಾರ್ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ,ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಇವರಿಗೆ ಬಳಗದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅಶಕ್ತರಿಗೆ ಸಹಾಯ,ದತ್ತಿನಿಧಿ  ವಿತರಣೆ ಜರಗಿತು. ಮುಖ್ಯ ಅಭ್ಯಾಗತರಾಗಿ ಎಂ.ಜಿ.ಎಮ್ ಕಾಲೇಜು ಇದರ ಪ್ರಾಂಶುಪಾಲ  ಲಕ್ಷ್ಮೀ ನಾರಾಯಣ ಕಾರಂತ, ಬಿಎಸ್ ಎನ್ ಎಲ್ ನಿವೃತ್ತ ಡಿಜಿಎಂ  ಕೆ . ಜಿ. ಸೂರ್ಯನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಸುಧಾಕರ. ಪಿ,ನಿವೃತ್ತ ಅಂಚೆ ಪಾಲಕ ಪಾರಂಪಳ್ಳಿ ಸದಾಶಿವ ಮಧ್ಯಸ್ಥ,ನ್ಯೂ ಕಾರ್ಕಡ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.

ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಶೀನ ಕೆ ವರದಿ ವಾಚಿದರು.ಬಳಗದ ಸದಸ್ಯರಾದ ನಾಗರಾಜ್ ಉಪಾಧ್ಯಾ,ಶೇಖರ್, ಕೆ. ಶ್ರೀಕಾಂತ್ ಐತಾಳ,  ಸನ್ಮಾನಪತ್ರ ವಾಚಿಸಿದರು. ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತುನೃತ್ಯ ವೈವಿದ್ಯ ಹಾಗೂ ಕಲಾ ಸ್ಪೂರ್ತಿ ಹವ್ಯಾಸಿ ತಂಡದವರ  ಮದಿ ಮನಿ ನಾಟಕ  ಜನಮನ ರಂಜಿಸಿತು, ಕೆ. ಚಂದ್ರಕಾoತ ನಾಯರಿ  ಸಾಂಸ್ಕöÈತಿಕ ಕಾರ್ಯಕ್ರಮ ನಿರೂಪಿಸಿದರು.

ಗೆಳೆಯರ ಬಳಗ  ಕಾರ್ಕಡ, ಸಾಲಿಗ್ರಾಮ  ಇದರ 37ನೇ ವಾರ್ಷಿಕೋತ್ಸವದಲ್ಲಿ ಯಕ್ಷಗುರು ಕೃಷ್ಣಮೂರ್ತಿ ಉರಾಳ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಎಂ ಜಯರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಎಂ.ಜಿ.ಎಮ್ ಕಾಲೇಜ್ ಪ್ರಾಂಶುಪಾಲರಾದ  ಲಕ್ಷ್ಮೀ ನಾರಾಯಣ ಕಾರಂತ,ಬಿಎಸ್ ಎನ್ ಎಲ್ ನಿವೃತ್ತ ಡಿಜಿಎಂ  ಕೆ . ಜಿ. ಸೂರ್ಯನಾರಾಯಣ ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *