
ಕೋಟ: ಇಲ್ಲಿನ ಕೋಟದ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು ಈ ಹಿನ್ನಲ್ಲೆಯಲ್ಲಿ ಇದರ ಶತಪರ್ವ ಮನವಿ ಪತ್ರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಬಿಡುಗಡೆಗೊಳಿಸಿದರು.
ಡಾ.ಕೋಟ ಶಿವರಾಮ ಕಾರಂತ ತಂದೆ ಶೇಷ ಕಾರಂತರು 1924ರಲ್ಲಿ ಪ್ರಾರಂಭಿಸಿದ ಈ ಶಾಂಭವೀ ಶಾಲೆ ನಾನು ಕಲಿತ ಶಾಲೆ ಎಂಬ ಹೆಮ್ಮ ಮತ್ತು ಹಮ್ಮು ನನಗಿದೆ ಪ್ರಸ್ತುತ ಕಾಲಘಟ್ಟದಲ್ಲಿ ಕಾರಂತ ಮನೆತನದ ಶಾಲೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅದೇ ರೀತಿ ಒಂದಿಷ್ಟು ಮುಂದಾಲೋಚನೆ ಇರಿಸಿಕೊಂಡು ಶಾಲೆಯ ಸರ್ವತೋಮುಖ ಶ್ರೇಯಸ್ಸು ಕಾಣವಂತ್ತಾಗಲು ಶಾಲಾ ಆಡಳಿತ ಮಂಡಳಿ ಹಾಗೂ ಹಿಂದಿನ ವಿದ್ಯಾರ್ಥಿ ಸಂಘ ಶ್ರಮಿಸಲಿ ಕಾರ್ಯಕ್ರಮ ಯಶಸ್ಸಿನ ತೇರಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಂ ಐತಾಳ್,ಸಂಚಾಲಕ ಸಚಿನ್ ಕಾರಂತ, ಮುಖ್ಯ ಶಿಕ್ಷಕ ದಿವಾಕರ್ ಐತಾಳ್,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ,ಜತೆ ಕಾರ್ಯದರ್ಶಿ ರವೀಂದ್ರ ಕೋಟ, ಸದಸ್ಯರಾದ ರಾಘವೇಂದ್ರ ಪೂಜಾರಿ, ಪ್ರದೀಪ್ ,ಶಾಲಾಭಿವೃದ್ಧಿ ಸಮಿತಿಯ.ಪ್ರಮುಖರಾದ ಶ್ರೀಕಾಂತ್ ಶೆಣೈ,ಸತೀಶ್ ಜಿ ಹೆಗ್ಡೆ ಮತ್ತಿತರರ ಇದ್ದರು.
ಕೋಟದ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇದೀಗ ಶತಮಾನೋತ್ಸವದ ಶತಪರ್ವ ಮನವಿ ಪತ್ರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಬಿಡುಗಡೆಗೊಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಂ ಐತಾಳ್, ಸoಚಾಲಕ ಸಚಿನ್ ಕಾರಂತ, ಮುಖ್ಯ ಶಿಕ್ಷಕ ದಿವಾಕರ್ ಐತಾಳ್,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ ಮತ್ತಿತರರು ಇದ್ದರು.














Leave a Reply