
ಕೋಟ: ಇಲ್ಲಿನ ಕೋಟದ ಕಾಸನುಗುಂದು ಪರಿಸರದ ಪೂರ್ಣಿಮಾ ಗಣೇಶ್ ಮೊಗವೀರ ಇತ್ತೀಚಿಗೆ ಮಂದಾರ್ತಿಯಿoದ ತನ್ನ ಪತಿಯೊಂದಿಗೆ ಬೈಕ್ನಲ್ಲಿ ಹಿಂತಿರುಗುವಾಗ ವಾಹನದಿಂದ ಬಿದ್ದು ತಲೆಗೆ ತೀವ್ರ ತರಹದ ಗಾಯಗಳಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಹಿನ್ನಲ್ಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಸಂಘಟನೆ ನೆರವಿಗೆ ಧಾವಿಸಿದ್ದು ಸುಮಾರು 22ಸಾವಿರ ರೂಗಳನ್ನು ಒಗ್ಗೂಡಿಸಿ ಶನಿವಾರ ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಪಂಚವರ್ಣದ ಗೌರವ ಸಲಹೆಗಾರರಾದ ಭಾರತಿ ವಿ.ಮಯ್ಯ ಹಸ್ತಾಂತರಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಅಶಕ್ತ ಅನಾರೋಗ್ಯ ಪೀಡಿತರ ನೆರವಿಗೆ ಸದಾ ಸ್ಪಂದಿಸುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಪಂಚವರ್ಣ ಸಂಘಟನೆ ಒಂದು ಹೆಜ್ಜೆ ಮುಂದಿರಿಸಿ ಕಾರ್ಯನಿರ್ವಹಿಸುತ್ತಿದೆ. ಸಂಘಸoಸ್ಥೆಗಳು ಕ್ರಿಯಾಶೀಲತೆ ಇದ್ದಾಗ ಇಂಥಹ ಕೆಲಸಗಳಿಗೆ ಸಹಾಯ ಮಾಡುವ ಕೈಗಗಳುಕೈಜೋಡಿಸುತ್ತವೆ ಎಂದು ಪೂರ್ಣಿಮಾಗಳಿಗೆ ಶೀಘ್ರ ಗುಣ ಮುಖರಾಗಿ ಸಮಾಜದೊಂದಿಗೆ ಬೆರೆಯಲು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಸಂಚಾಲಕ ಅಮೃತ್ ಜೋಗಿ, ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ, ದಿನೇಶ್ ಆಚಾರ್, ಶಿಸ್ತು ಸಮಿತಿ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ,ಕಾರ್ಯದರ್ಶಿ ವಸಂತಿ ಹಂದಟ್ಟು, ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ,ಕೋಟ ಗ್ರಾ.ಪಂ ಮಾಜಿ ಸದಸ್ಯ ರವೀಂದ್ರ ಜೋಗಿ ಮತ್ತಿತರರು ಇದ್ದರು.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಸುಮಾರು 22ಸಾವಿರ ರೂಗಳನ್ನು ಅನಾರೋಗ್ಯ ಪೀಡಿತ ಕಾಸನಗುಂದು ಪೂರ್ಣಿಮಾಳ ಪತಿ ಗಣೇಶ್ ಇವರಿಗೆ ಪಂಚವರ್ಣದ ಗೌರವ ಸಲಹೆಗಾರರಾದ ಭಾರತಿ ವಿ.ಮಯ್ಯ ಹಸ್ತಾಂತರಿಸಿದರು.
ಕೋಟ.ಮಾ.2 ನೆರವು
Leave a Reply