Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂಗಾರಕಟ್ಟೆ- ಸರ್ಕಾರಿ ಪ್ರಾಥಮಿಕ ಶಾಲೆ ಹಂಗಾರಕಟ್ಟೆಯಲ್ಲಿ ವಿಜ್ಞಾನ ಪ್ರದರ್ಶನ ಮತ್ತು ಕಾರ್ಯಾಗಾರ

ಕೋಟ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ದೂಳಂಗಡಿ) ಹಂಗಾರಕಟ್ಟೆ- ಮಾಬುಕಳದಲ್ಲಿ ವಿಜ್ಞಾನ ಪ್ರದರ್ಶನ ಮತ್ತು ಕಾರ್ಯಾಗಾರ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಯುವ ಮನಸ್ಸುಗಳು ರಚಿಸಿದ ನವನವೀನ ಮಾದರಿಗಳನ್ನು ವಿಜ್ಞಾನ ವಸ್ತು ಹಾಗೂ ಪುರಾತನ ಕಾಲದ ವಸ್ತುಗಳ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.

ಪ್ರದರ್ಶನವನ್ನು ಲಯನ್ಸ್ ಕ್ಲಬ್ ಬಾರ್ಕೂರು ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಈ ಗ್ರಾಮೀಣ ಸಂಸ್ಥೆಯ ಉದಯೋನ್ಮುಖ ವಿಜ್ಞಾನಿಗಳನ್ನು ಸೃಷ್ಠಿಸುತ್ತಿರುವ ಬಗ್ಗೆ ಶ್ಲಾಘಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಿರಣ್ ಕುಮಾರ್ ಕುಂದಾಪುರ ಭಾಗವಹಿಸಿದ್ದರು. ಅತ್ಯುತ್ತಮ ಸಾಧನೆಗಳಿಗಾಗಿ ರಾಷ್ಟ್ರೀಯ ಮಟ್ಟದ ಮೂವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಉಡುಪ ಅಧ್ಯಕ್ಷತೆ
ವಹಿಸಿದ್ದರು, ಲಯನ್ಸ್ ಕ್ಲಬ್ ಬಾರ್ಕೂರು ಇದರ ವತಿಯಿಂದ ಶಾಲಾ ವಿಜ್ಞಾನ ಶಿಕ್ಷಕಿ ವೀಣಾ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆ ಪಬ್ಲಿಕ್ ರಿಲೇಶನ್ ಲೈಸನ್ಸಿಂಗ್ ವಾಟರ್‌ವೇಸ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜರ್ ಪ್ರಕಾಶ್ ಗಣಾಚಾರಿ, ಬಿಆರ್‌ಪಿ ಉದಯ ಕೋಟ, ಸಿಆರ್‌ಪಿ ಮಾಲಿನಿ ಎಂಪಿ, ಚೇತನ ಪ್ರೌಢಶಾಲೆಯ ಎಚ್.ಎಂ ಕಲ್ಪನಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ಲಯನ್ಸ್ ಬಾರ್ಕೂರು ಕಾರ್ಯದರ್ಶಿ ಉದಯ ಎಸ್ ಶೆಟ್ಟಿ , ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸೇಸು ಟೀಚರ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ಪ್ರಸಿಲ್ಲಾ ನೊರೊನ್ಹಾ ಸ್ವಾಗತಿಸಿದರು. ಶಿಕ್ಷಕಿ ಉಷಾ ರಾಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಯಶೋದಾ, ರಮ್ಯಾ ಮತ್ತು ಲವೀನಾ ಒಲಿವೇರಾ ಸಹಕರಿಸಿದರು. ಹಂಗಾರಕಟ್ಟೆ- ಸರ್ಕಾರಿ ಪ್ರಾಥಮಿಕ ಶಾಲೆ ಹಂಗರಕಟ್ಟೆಯಲ್ಲಿ ವಿಜ್ಞಾನ ಪ್ರದರ್ಶನ ಮತ್ತು ಕಾರ್ಯಾಗಾರದಲ್ಲಿ ಲಯನ್ಸ್ ಕ್ಲಬ್ ಬಾರ್ಕೂರು ಇದರ ವತಿಯಿಂದ ಶಾಲಾ ವಿಜ್ಞಾನ ಶಿಕ್ಷಕಿ ವೀಣಾ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಹಂಗಾರಕಟ್ಟೆ ಪಬ್ಲಿಕ್ ರಿಲೇಶನ್ ಲೈಸನ್ಸಿಂಗ್ ವಾಟರ್‌ವೇಸ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜರ್ ಪ್ರಕಾಶ್ ಗಣಾಚಾರಿ, ಬಿಆರ್‌ಪಿ ಉದಯ ಕೋಟ, ಸಿಆರ್‌ಪಿ ಮಾಲಿನಿ ಎಂಪಿ, ಚೇತನ ಪ್ರೌಢಶಾಲೆಯ ಎಚ್.ಎಂ ಕಲ್ಪನಾ ಶೆಟ್ಟಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *