Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ-ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮನಸ್ಥಿತಿ ಬಿಡಿ, ಧಾರ್ಮಿಕ ಚಿಂತನೆ ಮೈಗೂಡಿಸಿಕೊಳ್ಳಿ- ಎಡ್ವಕೇಟ್ ಉದಯ್ ಹೊಳ್ಳ
ಸಾಲಿಗ್ರಾಮ ದೇಗುಲದ ಶ್ರೀ ಗುರುಧಾಮ ಲೋಕಾರ್ಪಣೆಗೊಳಿಸಿ ಹೇಳಿಕೆ

ಕೋಟ: ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು ನಮ್ಮ ಹಿರಿಯರನ್ನು ಸೇರಿಸುವ ಮನಸ್ಥಿತಿ ಅತಿಯಾಗಿ ವಿಜೃಂಭಿಸುತ್ತಿದೆ ಇದು ಆರೋಗ್ಯಕರ ಬೆಳವಣಿಗೆಯಲ್ಲ ,ಹಿಂದಿನ ಹಿರಿಯರು ಕೊಟ್ಟ ಪರಂಪರೆಯನ್ನು ಮೈಗೂಡಿಸಿಕೊಂಡು ವೃದ್ಧಾಶ್ರಮ ಪರಿಪಾಠಕ್ಕೆ ಮುಕ್ತಿಹಾಡಿ ಎಂದು ಕರ್ನಾಟಕ ಸರಕಾರದ ಪೂರ್ವ ಎಡ್ವಕೇಟ್ ಉದಯ್ ಹೊಳ್ಳ ಹೇಳಿದರು.

ಭಾನುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಶ್ರೀ ಗುರುಧಾಮ ವಸತಿ ಗೃಹ ಇದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಪ್ರತಿಯೊಬ್ಬರು ಧಾರ್ಮಿಕ ಚಿಂತನೆ ಮೈಗೂಡಿಸಿಕೊಳ್ಳಿ, ಹಾಗೇ ನಾವು ನಂಬಿದ ದೇಗುಲಗಳನ್ನು ಆಗಾಗ ಸಂದರ್ಶಿಸುವ ಕಾರ್ಯ ನಿರಂತರವಾಗಿ ನಡೆಯಲಿ  ಎಂದು ದೇಗುಲದ ಅಭಿವೃದ್ಧಿ ಕಾರ್ಯಗಳನ್ನು ಪ್ರಶಂಶಿಸಿದರು. ಸಭೆಯ ಅಧ್ಯಕ್ಷತೆಯನ್ನು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.

ಇದೇ ವೇಳೆ ದೇಗುಲದ ಗುರುಧಾಮಕ್ಕೆ ಸಹಕಾರ ನೀಡಿದ ದಾನಿಗಳಾದ ಯು ಎ.ಸದಾಶಿವ ಹೊಳ್ಳ ಉಪ್ಪಿನಕುದ್ರು, ಡಾ.ಕೆ.ಎಸ್ ಕಾರಂತ, ರವೀoದ್ರನಾಥ ಭಟ್ ಕಳಶ, ಡಾ.ವಿಷ್ಣುಮೂರ್ತಿ ಐತಾಳ್, ಗೋಪಾಲಕೃಷ್ಣ ಐತಾಳ್, ಎಚ್ ನರಸಿಂಹ ಐತಾಳ್ ಬೆಂಗಳೂರು ದಂಪತಿಗಳನ್ನು, ಅಧ್ಯಕ್ಷರು ಕೂಟ ಮಹಾಜಗತ್ತು ಅಂಗಸoಸ್ಥೆ ಬೆಂಗಳೂರು ಸೇರಿದಂತೆ ಹಲವು ಗಣ್ಯ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅಭ್ಯಾಗತರಾಗಿ  ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಬೆಂಗಳೂರು ಹೋಟೆಲ್ ಉದ್ಯಮಿ ಹರ್ತಟ್ಟು ಪ್ರಕಾಶ್ ಮಯ್ಯ, ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ವಿಶ್ರಾಂತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್ ಸತೀಶ್ ಹಂದೆ , ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ  ಪಿ.ಲಕ್ಷ್ಮೀ ನಾರಾಯಣ ತುಂಗ, ಉಪಾಧ್ಯಕ್ಷರಾದ ವೇ.ಮೂ. ಗಣೇಶಮೂರ್ತಿ ನಾವಡ ಕುಡಿನಲ್ಲಿ, ಸದಸ್ಯರಾದ ಎ.ವಿ. ಶ್ರೀಧರ ಕಾರಂತ ಬೆಂಗಳೂರು, ಕೆ. ಅನಂತಪದ್ಮನಾಭ ಐತಾಳ ಕೋಟ , ವೇ.ಮೂ. ಜಿ. ಚಂದ್ರಶೇಖರ ಉಪಾಧ್ಯ ಗುಂಡ್ಮಿ, ಆರ್. ಎಂ. ಶ್ರೀಧರ ರಾವ್ ಮೀಯಪದವು ಕೇರಳ ಮತ್ತಿತರರು ಉಪಸ್ಥಿತರಿದ್ದರು. ಪಿ. ಸದಾಶಿವ ಐತಾಳ ಕೃಷ್ಣಾಪುರ ಮಂಗಳೂರು ಇವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಗಣೇಶ್ ಮಧ್ಯಸ್ಥ ನಿರೂಪಿಸಿದರೆ, ಕೋಶಧಿಕಾರಿ ವೇ.ಮೂ. ಪರಶುರಾಮ ಭಟ್ಟ, ಎಡಬೆಟ್ಟು
ವಂದಿಸಿದರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಶ್ರೀಗುರುಧಾಮ ವಸತಿ ಗೃಹವನ್ನು ಕರ್ನಾಟಕ ಸರಕಾರದ ಪೂರ್ವ ಎಡ್ವಕೇಟ್ ಉದಯ್ ಹೊಳ್ಳ ಲೋಕಾರ್ಪಣೆಗೊಳಿಸಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಬೆಂಗಳೂರು ಹೋಟೆಲ್ ಉದ್ಯಮಿ ಹರ್ತಟ್ಟು ಪ್ರಕಾಶ್ ಮಯ್ಯ, ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ವಿಶ್ರಾಂತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಮತ್ತಿತರರು ಇದ್ದರು.

ಲೋಕಾರ್ಪಣೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ಶ್ರೀಗುರುನರಸಿಂಹ ದೇವರ ಸನ್ನಿಧಿಯಲ್ಲಿ ಸಹಸ್ರ ಸಂಖ್ಯಾ ನರಸಿಂಹ ಹೋಮ, ಪಂಚವಿoಶತಿ ಕಲಶಾಭಿಷೇಕ, ಮಹಾಪೂಜೆ ಸಂಜೆ 6-00 ರಿಂದ ಶ್ರೀ ಗುರುನರಸಿಂಹ ದೇವರಿಗೆ ಹಿರೇರಂಗಪೂಜೆ, ಉತ್ಸವಬಲಿ ಶ್ರೀ ಆಂಜನೇಯ ದೇವಳದವರೆಗೆ ರಜತರಥೋತ್ಸವವು ನಡೆಯಿತು. ಭೋಜನ ಪ್ರಸಾದ ,ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊoಡಿತು.

Leave a Reply

Your email address will not be published. Required fields are marked *