Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ- ಪಂಚವರ್ಣ ಸಂಘಟನೆ ದೇಶದ ಆಸ್ತಿ –ಮಾಜಿ.ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಆಶಯ
ವಿಶ್ವ ಮಹಿಳಾ ದಿನಾಚರಣೆ , ಪ್ರೇಮ.ಎಸ್.ಶೆಟ್ಟಿ ಸಾಧಕ ಮಹಿಳೆ  ಪುರಸ್ಕಾರ ಪ್ರದಾನ

ಕೋಟ: ಮಹಿಳೆಯನ್ನು ಪೂಜನೀಯ ಸ್ಥಾನದಲ್ಲಿ ನೋಡುವ ಮನಸ್ಥಿತಿ ಇರುತ್ತದೆಯೋ ಅಲ್ಲಿ ದೇವತೆಗಳು ನೆಲೆಯಾಗಿರುತ್ತದೆ ಎಂಬ ವಿಚಾರ ಈ ಭರತ ಭೂಮಿಯ ಪರಂಪರೆಯಲ್ಲಿದೆ, ಹೆಣ್ಣನ್ನು ಗೌರವಿಸುವ ಮನಸ್ಥಿತಿ ನಮ್ಮ ಅಕ್ಕಪಕ್ಕದಲ್ಲಿದ್ದಾಗ ಆಕೆ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಬೀಜಾಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಭಾನುವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಭಾಗಿತ್ವದಡಿ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನಿಸಿ ಮಾತನಾಡಿ ಸಮಾನತೆಯನ್ನು ಬದಿಗೊತ್ತಿ ಸಬಲೀಕರಣದ ಧ್ಯೇಯಕ್ಕೆ ಮುನ್ನುಡಿ ಬರೆಯಬೇಕು,ನೊಂದ ಮಹಿಳೆಗೆ ಸಾಂತ್ವಾನ ತುಂಬುವ ಮನಸ್ಥಿತಿ ಸೃಷ್ಠಿಯಾಗಬೇಕು, ಪಂಚವರ್ಣ  ಪ್ರತಿ ಕಾರ್ಯತಂತ್ರದಲ್ಲಿ ದೇಶ ಅಭಿವೃದ್ಧಿಯ ಪ್ರೇರಕ ಕಾರ್ಯವೈಕರಿಗಳಿವೆ ಇದರ ಪ್ರತಿಯೊಬ್ಬ ಸದಸ್ಯರು ಸಾಧಕರೆ,ಇವರು ವಾರ್ಷಿಕೋತ್ಸವಕ್ಕೆ ಸೀಮಿತವಾಗದ ನಿತ್ಯನಿರಂರರ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನೀಡುತ್ತಿರುವುದು ದೊಡ್ಡ ಸಾಧನೆಗೆ ಮುನ್ನುಡಿ ಬರೆದಂತೆ.

ಪoಚವರ್ಣ ಸಂಘಟನೆ ಅಲ್ಲಿನ ಸ್ಥಳೀಯ ಸುತ್ತಮುತ್ತಲಿನ ಗ್ರಾಮದ ಹಾಗೂ ದೇಶದ ಆಸ್ತಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ,ಯಾವುದೇ ಹಣ ಆಸ್ತಿ,ಸಂಪಾದನೆ ಇದ್ದರೆ ಸಾಲದು ಒಳ್ಳೆಯ ಪರಿಸರ ಇದ್ದರೆ  ಮಾತ್ರ ಬದುಕು ಕಾಣಲು ಸಾಧ್ಯ ಎಂದರಲ್ಲದೆ ಪ್ರೇಮ ಶೆಟ್ಟಿಯವರ ಸಾಧನೆ ಅಗಾಧವಾಗಿದೆ ಅಂತಹ ಸಾಧಕ ಮಹಿಳೆಯನ್ನು ಗುರುತಿಸಿ ಗೌರವಿಸುವ ಪಂಚವರ್ಣ ಸ್ನೇಹಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಮಹಿಳಾ ಸಾಧಕಿ ಪ್ರೇಮ ಎಸ್ ಶೆಟ್ಟಿ ಇವರಿಗೆ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷೆ ಕಕಲಾವತಿ ಅಶೋಕ್ ಸ್ವಾಗತಿಸಿದರು. ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿಷ್ಣುಮೂರ್ತಿ ಮಯ್ಯ  ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿದರೆ, ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಪoಚವರ್ಣ ಸಲಹಾ ಸಮಿತಿಯ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಭಾಗಿತ್ವದಡಿ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ ಪ್ರೇಮ ಎಸ್ ಶೆಟ್ಟಿ ಇವರಿಗೆ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿಷ್ಣುಮೂರ್ತಿ ಮಯ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *