Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ತಲೆ -ವ್ಯಕ್ತಿಗತ ಹಿತಕ್ಕಿಂತ
ಸಮುದಾಯದ ಹಿತವು ಮುಖ್ಯವಾಗಬೇಕು – ಡಾ.ಕೆ.ಎಸ್ ಕಾರಂತ

ಕೋಟ: ಕೊಂಕಣ ಖಾರ್ವಿ ಸಮಾಜ ಕೋಡಿತಲೆ ಇವರ ನೂತನ ಸಭಾ ಭವನವನ್ನು ಮಾ.೧೧. ಮಂಗಳವಾರ ಉದ್ಘಾಟನೆಗೊಂಡಿತು. ನೂತನ ಸಭಾ ಭವನವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿ ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ದ್ವೀಪವಾಗಿದ್ದ ಕೋಡಿತಲೆಯು ಹಂತ ಹಂತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದ್ದು , ಕಡಲ ಮಕ್ಕಳಾದ ಕೊಂಕಣ ಖಾರ್ವಿ ಸಮಾಜ ಬಾಂಧವರ ಸಂಘಟಿತ ಪ್ರಯತ್ನದಿoದ ಸಭಾ ಭವನವು ಪರಿವಾರ ಸಹಿತ ನಾಲ್ಕು ಪಾದ ಹಾಯ್ಗೂಳಿ ಮತ್ತು ಕೋಳೆರಾಯನ ಕೃಪೆಯಿಂದ ಲೋಕಾರ್ಪಣೆ – ಗೊಳ್ಳುತ್ತಿರುವುದು ಅಭಿಮಾನದ ಸಂಗತಿಯೆoದರು.

ಅಭ್ಯಾಗತರಾಗಿ ಕೋಡಿ ಪಂಚಾಯತಿಯ ಅಧ್ಯಕ್ಷೆ ಗೀತಾ ಖಾರ್ವಿ, ಉಡುಪಿ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಉದ್ಯಮಿ ವಿನಯಕುಮಾರ್ ಕಬ್ಯಾಡಿ , ನಿವೃತ್ತ ಶಿಕ್ಷಕ ಶಂಕರ್ ಉಪ್ಪೂರು, ಸಮಾಜದ ಗುರಿಕಾರ ರಾಮದಾಸ ಪಟೇಲ್, ಸಮಾಜದ ಅಧ್ಯಕ್ಷ ಆನಂದ ಖಾರ್ವಿ ಮುಂತಾದವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಕೋಡಿತಲೆ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತಿಗೊಂಡ ಶಂಕರ್ ಮಾಸ್ತರರನ್ನು ಖಾರ್ವಿ ಸಮಾಜ ಮತ್ತು ಯಕ್ಷೇಶ್ವರಿ ಭಜನಾ ಮಂಡಳಿಯ ವತಿಯಿಂದ ಆತ್ಮೀಯವಾಗಿ
ಸನ್ಮಾನಿಸಲಾಯಿತು.  ಕೊಂಕಣ ಖಾರ್ವಿ ಸಮಾಜ ಕೋಡಿತಲೆ ಇವರ ನೂತನ ಸಭಾ ಭವನವನ್ನುಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ.ಕೆ.ಎಸ್. ಕಾರಂತ ಉದ್ಘಾಟಿಸಿದರು. ಕೋಡಿ ಪಂಚಾಯತಿಯ ಅಧ್ಯಕ್ಷೆ ಗೀತಾ ಖಾರ್ವಿ, ಉಡುಪಿ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಇದ್ದರು.

Leave a Reply

Your email address will not be published. Required fields are marked *