ಕೋಟ: ಆನೆಗುಂದಿ ಗುರುಸೇವಾ ಪರಿಷತ್ ಕೋಟ ಮಂಡಲ ಇವರ ನೇತೃತ್ವದಲ್ಲಿ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಶ್ರೀ ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ ಹಾಗೂ ಶ್ರೀ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಇವರ ಸಹಕಾರದಲ್ಲಿ ಧಾರ್ಮಿಕ ಕಾರ್ಯಕ್ರಮ ಶ್ರೀ ಸೂಕ್ತ ಹೋಮ ಮತ್ತು ಶ್ರೀ ಗುರುಗಳ ಪಾದುಕಾ ಪೂಜೆ ಧಾರ್ಮಿಕ
ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ
ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಆಶ್ರೀವಚನ ನೀಡಿದರು. ವೇದಬ್ರಹ್ಮ ಶ್ರೀ ಲಕ್ಷ್ಮೀಕಾಂತ ಶರ್ಮಾ ಧಾರ್ಮಿಕ
ಪ್ರವಚನಗೈದರು.
ಸಭೆಯ ಅಧ್ಯಕ್ಷತೆಯನ್ನು ಬಆನೆಗುಂದಿ ಗುರುಸೇವಾ ಪರಿಷತ್ ಕೋಟ ಮಂಡಲ ಅಧ್ಯಕ್ಷ ರಾಘವೇಂದ್ರ ಆಚಾರ್ ವಹಿಸಿದ್ದರು. ಆನೆಗುಂದಿ ಶ್ರೀ ಕ್ಷೇತ್ರದ ಲೋಲಾಕ್ಷ ಇವರನ್ನು ಅಭಿನಂದಿಸಲಾಯಿತು. ಶುಭಾಶoಸನೆಯನ್ನು ಬಾರ್ಕೂರು ಕಾಳಿಕಾಂಬಾ ದೇಗುಲದ ಧರ್ಮದರ್ಶಿ ವಿ.ಶ್ರೀಧರ ಆಚಾರ್
ಗೈದರು. ಆನೆಗುಂದಿ ಗರುಸೇವಾ ಪರಿಷತ್ ಅಧ್ಯಕ್ಷರಾದ ಎಸ್. ಬಿ. ರಾಘವೇಂದ್ರ ಆಚಾರ್ಯ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ ,ಉದ್ಯಮಿಗಳಾದ ನಾರಾಯಣ ಆಚಾರ್, ಸತೀಶ್ ಆಚಾರ್ ಸಾಲಿಗ್ರಾಮ,ಕೋಟ ರಾಘವೇಂದ್ರ ಆಚಾರ್, ಹಳೆಯಂಗಡಿ ಮಹಾಲಿoಗೇಶ್ವರ ದೇಗುಲದ ಟ್ರಸ್ಟಿ ಸೂರ್ಯಕುಮಾರ್,ಕಾಳಿಕಾಂಬಾ ದೇಗುಲ ಬಾರ್ಕೂರ ಟ್ರಸ್ಟಿ ಪ್ರವೀಣ್ ಆಚಾರ್ ರಂಗನಕೆರೆ, ವಿಶ್ವಕಲಾವೃoದ ಅಧ್ಯಕ್ಷ ಚೇಂಪಿ ವೆoಕಟೇಶ ಆಚಾರ್, ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಅಧ್ಯಕ್ಷ ರಮ್ಯಾ ರಮೇಶ್ ಆಚಾರ್ ಉಪಸ್ಥಿತರಿದ್ದರು.
ನಾಗರಾಜ್ ಆಚಾರ್ ಯಡಬೆಟ್ಟು ಸ್ವಾಗತಿಸಿದರು. ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಗೌರವಾಧ್ಯಕ್ಷ ಜನಾರ್ದನ ಆಚಾರ್
ಚೇಂಪಿ ಪ್ರಾಸ್ತಾವನೆಗೈದರು. ಕಾರ್ಯಕ್ರಮವನ್ನು ಚಂದ್ರ ಆಚಾರ್ ಕೋಟ ನಿರೂಪಿಸಿದರು. ಇದೇ ವೇಳೆ ರಂಜಿತ ಆಚಾರ್ ನಿಲಾವರ ಶ್ರೀಗಳ ಚಿತ್ರ ಬಿಡಿಸಿ ಗಮನ ಸೆಳೆದರು. ಧಾರ್ಮಿಕ ಶ್ರೀ ಸೂಕ್ತ ಹೋಮ,ಪಾದುಕಾ ಪೂಜೆ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸೂಕ್ತ ಹೋಮ ಮತ್ತು ಶ್ರೀ ಗುರುಗಳ ಪಾದುಕಾ ಪೂಜೆಗಳು ಜರಗಿದವು. ವೇದಬ್ರಹ್ಮ ಶ್ರೀ ಲಕ್ಷ್ಮೀಕಾಂತ ಶರ್ಮಾರ ಆಚಾರ್ಯ ಇವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ಚೇಂಪಿ ವೆಂಕಟರಮಣ ದೇಗುಲದಿಂದ ಸಮುದಾಯದ ಮಹಿಳೆಯರು ಕಳಶ ಹಿಡಿದು ಚಂಡೆವಾದನದ ಮೂಲಕ ಸ್ವಾಮೀಜಿಯವರನ್ನು ಕರೆತರಲಾಯಿತು. ಆನೆಗುಂದಿ ಗರುಸೇವಾ ಪರಿಷತ್ ಅಧ್ಯಕ್ಷರಾದ ಎಸ್. ಬಿ. ರಾಘವೇಂದ್ರ ಆಚಾರ್ಯ ಸಾಲಿಗ್ರಾಮ,ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ, ಕೋಟತಟ್ಟು, ಕೋಶಾಧಿಕಾರಿ ಕೃಷ್ಣ ಆಚಾರ್ಯ, ಗುಂಡ್ಮಿ,ಪ್ರಧಾನ ಸಂಚಾಲ ಎ. ಗಣೇಶ ಆಚಾರ್ ಕೋಟ ಆನೆಗುಂದಿ ಗುರುಸೇವಾ ಪರಿಷತ್ ಕೋಟ ಮಂಡಲ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಆನೆಗುಂದಿ ಗುರುಸೇವಾ ಪರಿಷತ್ ಕೋಟ ಮಂಡಲ ಇವರ ನೇತೃತ್ವದಲ್ಲಿ ಶ್ರೀ ಸೂಕ್ತ ಹೋಮ.ಮತ್ತು ಶ್ರೀ ಗುರುಗಳ ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಆಶ್ರೀವಚನ ನೀಡಿದರು. ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ ಮತ್ತಿತರರು ಇದ್ದರು.


















Leave a Reply