ಕೋಟ: ಪ್ರತಿವರ್ಷ ಸಾಂಪ್ರದಾಯಿಕ.ಆಚರಣೆಗಳಲ್ಲಿ ಹೋಳಿ ಹಬ್ಬ ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ ಅದರಂತೆ ಈ ವರ್ಷ ಕೂಡಾ ವಿವಿಧ ಭಾಗಗಳಲ್ಲಿ ಹೋಳಿ ಆಚರಿಸುವಂತೆ ಇಲ್ಲಿನ ಕೋಡಿ ಹೊಸಬೇಂಗ್ರೆ ಅಂಗನವಾಡಿಯಲ್ಲಿ ಪುಟಾಣಿಗಳು ಹೋಳಿಯಾಟ ಆಡುವುದರ ಮೂಲಕ ಗಮನ ಸೆಳೆದರು.
ಚಿಣ್ಣರು ಒಬ್ಬರನ್ನೊಬ್ಬರು ವಿವಿಧ ತರಹದ ಬಣ್ಣ ಹಚ್ಚಿ
ಸಂಭ್ರಮಿಸಿಕೊoಡರು. ಅoಗನವಾಡಿಕಾರ್ಯಕರ್ತೆ ಯಮುನಾ ಎಲ್ ಕುಂದರ್ ಮಕ್ಕಳೊಂದಿಗೆ ಬೆರೆತು ಪೋಷಕರಿಗೆ ಹೋಳಿಯ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಪೋಷಕರು, ಬಾಲಾವಿಕಾಸ ಸಮಿತಿ ಸದಸ್ಯರಾದ ರಾಘವೇಂದ್ರ ಖಾರ್ವಿ ಹಾಗೂ ಖಾರ್ವಿ ಸಮುದಾಯದ ಪ್ರಮುರು ಉಪಸ್ಥಿತರಿದ್ದರು.
















Leave a Reply