Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೊ. ಪ್ರದೀಪ್ ಕುಮಾರ್ ಶೆಟ್ಟಿರವರ ಸ್ಮರಣಾರ್ಥ 10ನೇ ವರ್ಷದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಕೋಟ: ರೋಟರಿ ಕ್ಲಬ್ ಕೋಟ ಸಿಟಿ, ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ, ಕೋಟ ಗ್ರಾಮ ಪಂಚಾಯತ್ ಕೋಟತಟ್ಟು ಇಂದಿರ ಕ್ಲಿನಿಕಲ್ ಲ್ಯಾಬೊರೇಟರಿ, ಕೋಟ ಮೂರ್ಕೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ. ದಿ. ರೊ. ಪ್ರದೀಪ್ ಕುಮಾರ್ ಶೆಟ್ಟಿರವರ ಸ್ಮರಣಾರ್ಥ 10ನೇ ವರ್ಷದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಮಾ.16ರಂದು ಬೆಳಿಗ್ಗೆ 9ರಿಂದ 12ರ ತನಕ ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿ, ಕೋಟ ಮೂರ್ಕೆ ಇಲ್ಲಿ ಜರಗಲಿದೆ
ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ರೋಟರಿ ಕ್ಲಬ್ ಕೋಟ ಸಿ ಟಿ ಅಧ್ಯಕ್ಷ ಅನಿಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಕ್ಕಾಗಿ ವಿಷ್ಣುಮೂರ್ತಿ ಉರಾಳ -ಮೊ.9591580300

Leave a Reply

Your email address will not be published. Required fields are marked *