ಕೋಟ: ಸಮಾಜದ ಒಳಿತಿನಲ್ಲಿ ಸ್ಥಳೀಯ ಗ್ರಾಮ ದೇವರುಗಳ ಶಕ್ತಿ ಪರಿಪೂರ್ಣವಾದದ್ದು ಗ್ರಾಮದ ದೇವತೆಗಳು ಶಕ್ತಿಪೀಠಗಳಾಗಿ ಭಕ್ತರಲ್ಲಿ ನೆಲೆಯೂರಿದೆ ಎಂದು ಧಾರ್ಮಿಕ ಚಿಂತಕ ದಾಮೋದರ ಶರ್ಮ ಹೇಳಿದರು. ಚಿತ್ರಪಾಡಿ ಶ್ರೀ ಮಾರಿಯಮ್ಮ ದೇವಸ್ಥಾನ
ಇದರ ವಾರ್ಷಿಕ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿ ಈ ಭರತ ಖಂಡ ಆಧ್ಯಾತ್ಮಿಕ ತಾಣವಾಗಿ ವಿಶ್ವವನ್ನು ಸೆಳೆಯುತ್ತಿದೆ ಇಲ್ಲಿನ ಆಚಾರ ವಿಚಾರ ಪರಂಪರೆ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.
ಅದೇ ರೀತಿ ನಮ್ಮ ಧಾರ್ಮಿಕ ಕ್ಷೇತ್ರಗಳು ನಮ್ಮ ಸಂಸ್ಕ್ರತಿಯ ತೋರಣಗಳಾಗಿವೆ, ಸ್ಥಳೀಯ ಮಾರಿಯಮ್ಮ
ದೇವಿಯು ಉಪಾಸನೆ ಅತ್ಯಂತ ವಿಶಿಷ್ಟವಾದದ್ದು, ಅಂತೆಯೇ ಧಾರ್ಮಿಕ ಕೈಂಕರ್ಯ ನಿಸ್ವಾರ್ಥ ಸೇವೆ
ಮಹತ್ವವನ್ನು ಪಡೆದುಕೊಳ್ಳುತ್ತದೆ, ಧಾರ್ಮಿಕತೆಯಲ್ಲಿ
ಬಗ್ಗೆ ಯುವ ಸಮಯದಾಯ ಹೆಚ್ಚು ಹೆಚ್ಚು ಆಸಕ್ತಿ ವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು, ದೇಗುಲಗಳ
ಅಭಿವೃದ್ಧಿ ಗ್ರಾಮಗಳ ಅಭಿವೃದ್ಧಿ ರೀತಿಯಲ್ಲಿ ಕಂಗೊಳಿಸುತ್ತವೆ, ನಮ್ಮಲ್ಲಿ ವಿದೇಶಿ ಸಂಸ್ಕತಿ ಅಂತ್ಯಗೊಳ್ಳಬೇಕು ಈ ಮೂಲಕ ನಮ್ಮ ಶ್ರೀಮಂತ ಸನಾತನ ಹಿಂದೂ ಪರಂಪರೆ ಜಗದಗಲ ಪಸರಿಸಬೇಕು
ಎಂದು ಕರೆ ಇತ್ತರು.
ಸಭೆಯ ಅಧ್ಯಕ್ಷತೆಯನ್ನು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ ಗಾಣಿಗ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಉದ್ಯಮಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು. ದೇಗುಲದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಎಂ.ಜಿ ಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಕಾರಂತ ಸ್ವಾಗತಿಸಿದರು. ಕಾರ್ಯಕ್ರಮವನ್ನು ದೇಗುಲದ
ಕಾರ್ಯದರ್ಶಿ ನಾಗೇಂದ್ರ ಆಚಾರ್ ನಿರೂಪಿಸಿ ವಂದಿಸಿದರು. ಚಿತ್ರಪಾಡಿ ಶ್ರೀ ಮಾರಿಯಮ್ಮ ದೇವಸ್ಥಾನ
ಇದರ ವಾರ್ಷಿಕ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ದಾಮೋದರ ಶರ್ಮ ಪ್ರವಚನ ನೀಡಿ ಮಾತನಾಡಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ
ಜಗದೀಶ್, ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಉದ್ಯಮಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.
















Leave a Reply