Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣದ 246ನೇ ಭಾನುವಾರ
ಪರಿಸರಸ್ನೇಹಿ ಅಭಿಯಾನ.
ಸ್ವಚ್ಛತೆ ಪ್ರತಿಯೊಬ್ಬರಲ್ಲೂ
ಜಾಗೃತಗೊಳ್ಳಬೇಕು – ಎಚ್. ಪ್ರಮೋದ್ ಹಂದೆ.

ಕೋಟ: ಸ್ವಚ್ಛತೆ ಎಂಬುವುದು ಪ್ರತಿಯೊಬ್ಬರಲ್ಲೂ ಜಾಗೃತಗೊಂಡಾಗ ಪರಿಸರನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಈ ದಿಸೆಯಲ್ಲಿ ಪಂಚವರ್ಣ ನಿರಂತರ ಅಭಿಯಾನ ಹೊಸ ಅಧ್ಯಾಯಕ್ಕೆಮುನ್ನುಡಿ ಬರೆಯಲಿದೆ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಕೋಟತಟ್ಟು ಗ್ರಾಮಪಂಚಾಯತ್, ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಟ, ಮಣೂರು ಫ್ರೆಂಡ್ಸ್ ಹoದಟ್ಟು ಮಹಿಳಾ ಬಳಗ ಕೋಟ ಇವರುಗಳ ಸಹಯೋಗದೊಂದಿಗೆ 246ನೇ ಪರಿಸರಸ್ನೇಹಿ ಅಭಿಯಾನ ಕೋಟತಟ್ಟು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ಕೆ
ಚಾಲನೆಗೊಳಿಸಿ ಮಾತನಾಡಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಇಡೀ ಮನುಕುಲಕ್ಕೆ ಸಂಕಷ್ಟವನ್ನು ತoದೊಡ್ಡುತ್ತಿದೆ ಅದರ ಬಳಕೆ ಕೂಡಾ ಅತಿಯಾಗಿ ವಿಜೃಂಭಸುತ್ತಿದೆ ಇದರಿಂದ ಭೂಮಿಗೆ ಸಮಿತಗೊಳ್ಳದೆ ಸಮುದ್ರ ಸೇರಿದಂತೆ ವಿವಿಧ ಭಾಗಗಳಿಗೆ ಕಂಠಕವಾಗಿ ಪರಿಣಮಿಸಿದೆ , ಇದರ ಬಗ್ಗೆ ಜಾಗೃತಗೊಳ್ಳುವುದು ಅತ್ಯವಶ್ಯಕ ಎಂದರಲ್ಲದೆ ಪಂಚವರ್ಣ ಸಂಘಟನೆ ನಿರಂತರ ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನ ಅತ್ಯಂತ ಪ್ರಶಂನೀಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ವಾಸು ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ.ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಯುವಕ ಮಂಡಲದ ನಿಕಟ ಪೂರ್ವ ಅಧ್ಯಕ್ಷ ಅಜಿತ್ ಆಚಾರ್,ಸಂಚಾಲಕ ಅಮೃತ್ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು
ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಕೋಟದ ಪಂಚವರ್ಣ ಯುವಕ ಮಂಡಲ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ
ಮಂಡಲ ಇದರ ನೇತೃತ್ವದಲ್ಲಿ246ನೇ ಪರಿಸರಸ್ನೇಹಿ ಅಭಿಯಾನ ಕೋಟತಟ್ಟು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ಕೆ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ
ಎಚ್ ಪ್ರಮೋದ್ ಹಂದೆ ಚಾಲನೆ ನೀಡಿದರು.

ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ವಾಸು ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು
ಇದ್ದರು.

Leave a Reply

Your email address will not be published. Required fields are marked *