Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆತ್ಮವಿಶ್ವಾಸವೇ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ’ – ಶ್ರೀಮತಿ ಸುಮಲತಾ

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಹಾಗೆ ಮಹಿಳೆಯು ತನ್ನ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾಳೆ. ಸಂವಿಧಾನಾತ್ಮಕವಾಗಿ ದೊರೆತ ಹಕ್ಕುಗಳನ್ನು ಬಳಸಿಕೊಂಡು ಆ ಮೂಲಕ ಮಹಿಳೆ ಬೆಳೆಯುತ್ತಿದ್ದಾಳೆ. ಮಹಿಳೆ ಆತ್ಮವಿಶ್ವಾಸವನ್ನು ಹೊಂದಬೇಕು ಮತ್ತು ತನ್ನ ಮೇಲೆ ತಾನು ಭರವಸೆ ಹೊಂದಿದ್ದರೆ ಮಹಿಳೆ ಸಬಲೆಯಾಗಲು ಕಾರಣವಾಗುತ್ತದೆ. ಎಂದು ಶ್ರೀಮತಿ ಸುಮಲತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇವರು ಹೇಳಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ ಇಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಕಾಲೇಜಿನ ಮಹಿಳಾ ಸಂಘ ಆಯೋಜಿಸಿದ್ದ  ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ದೀಪ ಗಣಪತಿ ಶೆಟ್ಟಿ, ಮುಖ್ಯೋಪಾಧ್ಯಾಯರು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ, ಇವರು ಮಹಿಳೆಯು ನಿರ್ವಹಿಸುವ ಹಲವು ಪಾತ್ರಗಳು ಮತ್ತು ಸಾಧನೆಯನ್ನು ತಾಯ್ತನದ ವರ್ಣನೆಯ ಮೂಲಕ ಕಟ್ಟಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆಯನ್ನು ವಹಿಸಿ ಜೀವನದ ಅನುಭವಗಳ ಮೂಲಕ ಮಹಿಳೆಯರ ಮಹತ್ವವನ್ನು ಹೇಳಿದರು. ಜಿ.ಎಸ್ ಶಿವರುದ್ರಪ್ಪನವರ ‘ಆಕಾಶದ ನೀಲಿಯಲ್ಲಿ’ ಎನ್ನುವ ಕವಿತೆಯನ್ನು ವಾಚಿಸಿದರು. ಮಹಿಳಾ ಸಂಘದ ಸಂಚಾಲಕಿ ಶ್ರೀಮತಿ ಪ್ರವೀಣಾ ಪ್ರಸ್ತಾವನೆ ಗೈದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಸಹನಾ ಸ್ವಾಗತಿಸಿ ವಿದ್ಯಾರ್ಥಿನಿ ಆಶಾ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.  ವಿದ್ಯಾರ್ಥಿ ಪ್ರತಿನಿಧಿ ಅಂತಿಮ ಬಿಕಾಂ ವಿದ್ಯಾರ್ಥಿ ಕೀರ್ತಿ, ಕ್ಷೇಮ ಪಾಲನ ಅಧಿಕಾರಿ ಡಾ. ಗಿರೀಶ್ ಶಾನುಭೋಗ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ವಸಂತ.ಜಿ  ಹಾಜರಿದ್ದರು.

Leave a Reply

Your email address will not be published. Required fields are marked *