Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 44ನೇ ಮಾಲಿಕೆ, ಯಡಬೆಟ್ಟಿನ ರಾಮಕೃಷ್ಣ ಐತಾಳ್ ರೈತ ಪುರಸ್ಕಾರ
ರೈತ ಸಮುದಾಯವನ್ನು ನಿರ್ಲಕ್ಷಿಸದಿರಿ – ಗುಂಡ್ಮಿ ರಾಮಚಂದ್ರ ಐತಾಳ್

ಕೋಟ: ರೈತರನ್ನು ನಿರ್ಲಕ್ಷಿಸದಿರಿ ಅವರಿಗೆ ಸರಕಾರ ಹೆಚ್ಚಿನ ಸೌಲಭ್ಯ ಒದಗಿಸುವಂತ್ತಾಗಬೇಕು ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಹೇಳಿದರು.

ಶುಕ್ರವಾರ ಪಾಂಡೇಶ್ವರ ಯಡಬೆಟ್ಟಿನಲ್ಲಿ  ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ರೈತಧ್ವನಿ ಸಂಘ ಕೋಟ,ಗೀತಾನಂದ ಫೌಂಡೇಶನ್ ಮಣೂರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 44ನೇ ಪಂಚವರ್ಣ ರೈತ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ರೈತನಿದ್ದರೆ ಮಾತ್ರ ನಾವುಗಳು ಬದುಕಲು ಸಾಧ್ಯ ಆದರೆ ಅವರನ್ಮು ಗುರುತಿಸುವ ಪರಂಪರೆ ಸಮಾಜದಲ್ಲಿ ಮರೆಯಾಗಿದೆ.

ಈ ದಿಸೆಯಲ್ಲಿ ಪಂಚವರ್ಣದ ರೈತರೆಡೆಗೆ ನಮ್ಮನಡಿಗೆ ಮಹತ್ವ ಪಡೆದುಕೊಂಡಿದೆ ಅವರ ಕ್ರೀಯಾಶೀಲ ಕಾರ್ಯಕ್ರಮಗಳು ಮನೆಮಾತಾಗಿ ಜನಮನದಿ ಉಳಿದುಕೊಂಡಿದೆ ಎಂದರಲ್ಲದೆ ಯಡಬೆಟ್ಟಿನ ರಾಮಕೃಷ್ಣ ಐತಾಳ್ ಎಂಬ ಹಿರಿಯ ಕೃಷಿಕನ್ನು ಗೌರವಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇದೇ ವೇಳೆ
ಪಾಂಡೇಶ್ವರ ಯಡಬೆಟ್ಟು ಹಿರಿಯ ಕೃಷಿಕ ರಾಮಕೃಷ್ಣ ಐತಾಳ್ ಇವರಿಗೆ ಪಂಚವರ್ಣ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಶೇಷವಾಗಿ ಗಿಡ ನಡುವ ಮೂಲಕ ಕಾರ್ಯಕ್ರಮ ಪ್ರಾರಂಭಗೊoಡಿತು. ಪಾoಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ದೀಪಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಸಾಸ್ತಾನ ಸಿ.ಎ ಬ್ಯಾಂಕ್ ಉಪಾಧ್ಯಕ್ಷ  ಗೋವಿಂದ ಪೂಜಾರಿ ಅಭಿನಂದನಾ ನುಡಿಗಳನ್ನಾಡಿದರು.

ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಕಲ್ಪನಾ ದಿನಕರ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು.ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕಿ ಸುಜಾತ ಎಂ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು.

ಕೋಟದ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 44ನೇ ಮಾಲಿಕೆ, ಯಡಬೆಟ್ಟಿನ ರಾಮಕೃಷ್ಣ ಐತಾಳ್ ಇವರಿಗೆ ರೈತ ಪುರಸ್ಕಾರ ನೀಡಿಒ ಗೌರವಿಸಲಾಯಿತು.ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಸಾಸ್ತಾನ ಸಿ.ಎ ಬ್ಯಾಂಕ್ ಉಪಾಧ್ಯಕ್ಷ  ಗೋವಿಂದ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *