Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜೆಎಸ್ಎಸ್ ಪ್ರೌಢಶಾಲೆ ವಿಜಯನಗರ, ಮೈಸೂರ ಇಲ್ಲಿ ಉಚಿತ  ಪ್ರೌಢಶಾಲೆ ಮತ್ತು ಹಾಸ್ಟೆಲ್..!

ವರದಿ : ಅಶ್ವಿನಿ ಅಂಗಡಿ

ಮೈಸೂರಲ್ಲಿ ಉಚಿತವಾಗಿ ಪ್ರೌಢಶಾಲೆಗೆ ಹಾಗೂ ಹಾಸ್ಟೆಲ್ ಗೆ ಸೇರ ಬಯಸುವ ವಿದ್ಯಾರ್ಥಿಗಳಿಗಿದೋ ಸುವರ್ಣಾವಕಾಶ..!

ಅನಾಥ ಮಕ್ಕಳಿಗೆ, ಕೇವಲ ತಂದೆ ಅಥವಾ ಕೇವಲ ತಾಯಿ ಇರುವ ಮಕ್ಕಳಿಗೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಬಡ  ಮಕ್ಕಳಿಗೆ, ಯಾವುದೇ ಜಾತಿ ಭೇದವಿಲ್ಲದೆ ಸೇರಿಸಿಕೊಳ್ಳುವ, ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಒದಗಿಸುವ, ಹಾಸ್ಟೆಲ್ ಇರುವ  ಪ್ರೌಢಶಾಲೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..!  ಖಂಡಿತವಾಗಿಯೂ ತಮಗಿದೊಂದು ಸುವರ್ಣಾವಕಾಶ ಕಲ್ಪಿಸಿಕೊಡಲಿದೆ..!
ಸೇರ ಬಯಸುವ ಆಸಕ್ತ ಮಕ್ಕಳು ಹಾಗೂ ಸೇರಿಸ ಬಯಸುವ ತಂದೆ/ತಾಯಿ/ಪಾಲಕ/ಪೋಷಕರು ದಯಮಾಡಿ ಗಮನಿಸಿ:
8 ರಿಂದ 10 ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದ ಪ್ರತಿಷ್ಠಿತ ಜೆಎಸ್ಎಸ್.   ಪ್ರೌಢಶಾಲೆಯಲ್ಲಿ ಪ್ರವೇಶಾತಿಯೂ ಸೇರಿದಂತೆ, ಊಟ, ವಸತಿ, ಸಮವಸ್ತ್ರ, ನೋಟ್ಸ್, , ಶೂಸ್ ಹೀಗೇ ಎಲ್ಲವೂ ಇಲ್ಲಿ ಸೇರಲಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತವಾಗಿ ಸಿಗಲಿವೆ..!

ವಿವಿಧ ಸಂಕಷ್ಟಗಳ ಕಾರಣಗಳಿಂದ  ಓದಲಾಗದೆ
ತೊಂದರೆಯಲ್ಲಿರುವ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ವಸತಿ/ಆಶ್ರಯ/ಶಿಕ್ಷಣ ನೀಡಲಿರುವ ಹಾಸ್ಟೆಲ್ ಹಾಗೂ ಈ ಪ್ರೌಢಶಾಲೆ, ನಿಜಕ್ಕೂ ಬಡ ಮಕ್ಕಳ ಪಾಲಿಗೆ ಆಶಾಕಿರಣ

ಮೊದಲು ಸಂಪರ್ಕಿಸುವವರಿಗೆ ಅಥವಾ ಬಂದವರಿಗೆ ಪ್ರಥಮಾಧ್ಯತೆ..! ಈಗಲೇ ಕರೆಮಾಡಿ ಸಂಪರ್ಕಿಸಿ ಅಥವಾ ಸ್ವತಃ ಬಂದು, ಮುಂದೆ ಹೆಸರಿಸಿದ ಶಿಕ್ಷಕ ಶಿಕ್ಷಕಿಯರ ಕಂಡು ತಮ್ಮ ಮಕ್ಕಳಿಗೆ ಅವಕಾಶ ಖಚಿತಪಡಿಸಿಕೊಳ್ಳಿ..!

ಪ್ರವೇಶಾತಿಗಾಗಿ ತಾವು ಸಂಪರ್ಕಿಸಬೇಕಾದ/ಅಥವಾ ಕಾಣಬೇಕಾದ ಶಿಕ್ಷಕ/ಶಿಕ್ಷಕಿಯರ ಹೆಸರು ಹಾಗೂ ಪೋನ್ ವಿವರ:
೧) ಶ್ರೀ ಕೆ.ಎನ್.ರವಿಶಂಕರ್
     Mo: 9845112450
೨)ಶ್ರೀ ಮಂಜುನಾಥ
     Mo: 9902034507
೩)ಶ್ರೀ ಸಿದ್ದಲಿಂಗಪ್ಪ
     Mo:9980813822
೪)ಶ್ರೀ ವೀರಭದ್ರಸ್ವಾಮಿ
     Mo : 9986915484
೫)ಶ್ರೀ ಆನಂದ್
    Mo: 9731026205

Leave a Reply

Your email address will not be published. Required fields are marked *