Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ಣಾಟಕ ಬ್ಯಾಂಕ್ ಕಡ್ತಲ (ವಿತ್ತೀಯ) ಶಾಖೆಯ ಉದ್ಘಾಟನೆ

ಉಡುಪಿ: ದೇಶದ ಹೆಸರಾಂತ ಖಾಸಗಿ ಬ್ಯಾಂಕಿನ 956 ನೇ ಶಾಖೆಯು ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್, ಹಿರಿಯಡ್ಕ – ಅಜೆಕಾರು ರಸ್ತೆ, ಕಡ್ತಲ ಗ್ರಾಮ, ಕಾರ್ಕಳ ತಾಲೂಕಿನಲ್ಲಿ (ಮಾರ್ಚ್ 27, 2025) ಉದ್ಘಾಟನೆಗೊಂಡಿದೆ. ಈ ಹೊಸ ಶಾಖೆ ಕಡ್ತಲ ಹಾಗೂ ಹತ್ತಿರದ ಹಲವಾರು ಹಳ್ಳಿಯ ಗ್ರಾಮೀಣ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ದೊರಕಿಸಲು ಸಜ್ಜಾಗಿದೆ.

ಈ ಶಾಖೆಯ ಹಾಗೂ ಮಿನಿ ಇ-ಲಾಭಿಯ ಉದ್ಘಾಟನೆಯನ್ನು  ಮುಖ್ಯ ಅತಿಥಿಗಳಾದ ಜ್ಯೋತಿರ್ವಿಧ್ವಾನ್  ಶ್ರೀ ಕೆ. ಪಿ. ಕುಮಾರಗುರು ತಂತ್ರಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕರಾದ ಶ್ರೀಮತಿ ಅಶ್ವಿನಿ ಎಸ್ ಹೆಗ್ಡೆ ಹಾಗೂ ಶ್ರೀ ಸುಕೇಶ್ ಹೆಗ್ಡೆ, ಕೈಗಾರಿಕೋದ್ಯಮಿ ಶ್ರೀ ಯೋಗೇಶ್ ಮಲ್ಯ, ಸಿವಿಲ್ ಇಂಜಿನಿಯರ್ ಶ್ರೀ ಪ್ರಶಾಂತ್ ಬೆಳಿರಾಯ, ರಿಟೈರ್ಡ್ ಪ್ರೊಫೆಸರ್ ಶ್ರೀ ಕರುಣಾಕರ ಹೆಗ್ಡೆ, ಬ್ಯಾಂಕಿನ ಸಹಾಯಕ ಮಹಾ ಪ್ರಭಂದಕರಾದ ಶ್ರೀ ವಾದಿರಾಜ ಕೆ, ಮುಖ್ಯ ಪ್ರಬಂಧಕರಾದ ಶ್ರೀ ಮನೋಜ್ ಕೋಟ್ಯಾನ್, ಶ್ರೀ ಪ್ರದೀಪ್ ಕುಮಾರ್ ಕೆ ಆರ್,  ಶ್ರೀ ಮಹೇಶ್ ಕೆ ಕೆ, ಕಡ್ತಲ ಶಾಖೆಯ ವ್ಯವಸ್ಥಾಪಕರಾದ ಶ್ರೀ ವಿಜೇತ್ ರೈ, ಇನ್ನಿತರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ಅಶ್ವಿನಿ ಎಸ್ ಹೆಗ್ಡೆ ಹಾಗೂ ಶ್ರೀ ಸುಕೇಶ್ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಉಡುಪಿ ವಲಯದ ಬ್ಯಾಂಕಿನ ಸಹಾಯಕ ಮಹಾ ಪ್ರಭಂದಕರಾದ ಶ್ರೀ ವಾದಿರಾಜ ಕೆ ಅವರು ಗಣ್ಯರನ್ನು ಸ್ವಾಗತಿಸಿದರು, ಕಡ್ತಲ ಶಾಖೆಯ ವ್ಯವಸ್ಥಾಪಕರಾದ ಶ್ರೀ ವಿಜೇತ್ ರೈ ಧನ್ಯವಾದ ಸಮರ್ಪಿಸಿದರು ಹಾಗೂ ಅಮಾಸೆಬೈಲು ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಶ್ರೀ ರಾಘವೇಂದ್ರ ಶೆಟ್ಟಿರವರು ಸಮಾರಂಭದ ಸಮಾಯೋಜಕರಾಗಿ ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *