
ಕೋಟ: ನಾರಾಯಣ ಮಯ್ಯರ ಚಿಂತನೆ ಹಾಗೂ ಅವರ ಕಾರ್ಯವೈಕರಿ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದು ಸೇವಾ ಸಂಗಮ ಶಿಶು ಮಂದಿರ ಕೋಟ ಇದರ ನೂತನ ಅಧ್ಯಕ್ಷ ಕೆ.ಶ್ರೀಕಾಂತ್ ಶೆಣೈ ಅಭಿಪ್ರಾಯಪಟ್ಟರು.
ಶುಕ್ರವಾರ ಇತ್ತೀಚಿಗೆ ನಿಧನಹೊಂದಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಣೂರು ನಾರಾಯಣ ಮಯ್ಯ ಇವರಿಗೆ ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ಏರ್ಪಡಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಭನಮನಗೈದು ಮಾತನಾಡಿ ಸಂಘದ ನಿಷ್ಠೆ ಹಾಗೂ ಅವರ ಕ್ರೀಯಾಶೀಲತ್ವ ಕಾರ್ಯವೈಕರಿ ಸಾಮಾಜಿಕ ಬದ್ದತೆ ಅವರ ಬಹುಕಾಲ ನೆನಪು ಉಳಿಯುವಂತೆ ಮಾಡಿದೆ.ಅವರು ಕೋಟದ ಸೇವಾ ಸಂಗಮ ಶಿಶು ಮಂದಿರದ ಏಳಿಗೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದ ದಿನಗಳನ್ನು ಸಭೆಯಲ್ಲಿ ತೆರೆದಿಟ್ಟರು.
ಇದೇ ವೇಳೆ ಅವರ ಬಹುಕಾಲದ ಒಡನಾಡಿಗಳಾದ ಗೀತಾ ಹೆಗ್ಡೆ,,ಲಕ್ಷ್ಮೀ, ವಸುಧಾ ಪ್ರಭು, ಬಾಗ್ಯವಾದಿರಾಜ್, ಸೇವಾಸಂಗಮ ಶಿಶುಮಂದಿರ ಆಡಳಿತ ಸಮಿತಿಯ ನಿರ್ಗಮಿತ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಸದಸ್ಯರಾದ ರವೀಂದ್ರ ಕೋಟ, ಚಂದ್ರಿಕಾ ಭಟ್, ರೇಣುಕಾ ಮಯ್ಯ, ಸವಿತಾ ಅಡಿಗ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇತ್ತೀಚಿಗೆ ನಿಧನಹೊಂದಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಣೂರು ನಾರಾಯಣ ಮಯ್ಯ ಇವರಿಗೆ ಕೋಟದ. ಸೇವಾಸಂಗಮ ಶಿಶುಮಂದಿರದಲ್ಲಿ ಏರ್ಪಡಿಸಲಾದ ನುಡಿನಮನ ಕಾರ್ಯಕ್ರಮದಲ್ಲಿಸೇವಾ ಸಂಗಮ ಶಿಶು ಮಂದಿರ ಕೋಟ ಇದರ ನೂತನ ಅಧ್ಯಕ್ಷ ಕೆ.ಶ್ರೀಕಾಂತ್ ಶೆಣೈ ನುಡಿನಮನಗೈದರು. ಬಹುಕಾಲದ ಒಡನಾಡಿಗಳಾದ ಗೀತಾ ಹೆಗ್ಡೆ, ಲಕ್ಷ್ಮೀ, ವಸುಧಾ ಪ್ರಭು, ಬಾಗ್ಯವಾದಿರಾಜ್, ಸೇವಾಸಂಗಮ ಶಿಶುಮಂದಿರ ಆಡಳಿತ ಸಮಿತಿಯ ನಿರ್ಗಮಿತ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಮತ್ತಿತರರು ಇದ್ದರು.
Leave a Reply