ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಸ್ಥೆ, ಉಡುಪಿ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ನಾರಿ ನಮನ’ ವಿಶಿಷ್ಟ ಕಾರ್ಯಕ್ರಮವು ಮಾರ್ಚ್ 28ರಂದು ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ಜರುಗಿತು.
ಕಟಪಾಡಿ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ನ ನಿರ್ದೇಶಕಿ ಶ್ರೀಮತಿ ಲಕ್ಷ್ಮೀ ಬಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿ ದಿಕ್ಸೂಚಿ ಭಾಷಣ ಮಾಡಿದರು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಸ್ಥೆಯ ಉಡುಪಿ ಘಟಕದ ಅಧ್ಯಕ್ಷ ಪ್ರದೀಪ್ ಆರ್ ಭಕ್ತ ಅಧ್ಯಕ್ಷತೆ ವಹಿಸಿ ಮಹಿಳೆಯರ ಹಿರಿಮೆ ಹಾಗೂ ಸಬಲೀಕರಣದ ಬಗ್ಗೆ ಮಾತನಾಡಿದರು. ಸಂಘಟನಾ ಸಮಿತಿ ಅಧ್ಯಕ್ಷೆ ಶಶಿಕಲಾ ರಾಜವರ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪದ್ಮಾ ಕಿಣಿ ತಮ್ಮ ಅನಿಸಿಕೆ ಹಂಚಿಕೊಂಡರು.
ಶ್ರೀಮತಿ ಡಿ ರಾವ್ ಪ್ರಾರ್ಥಿಸಿದರು. ಸುನೀತ ಸತೀಶ್ ಅತಿಥಿಗಳನ್ನು ಪರಿಚಯಿಸಿದರು. ಮಾಲತಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು ಮಹಿಳೆಯರಿಂದ ಸಮೂಹ ಗಾಯನ. ಸ್ಕಿಟ್,ಮೋಜಿನ ಸ್ಪರ್ಧೆ,ಮನರಂಜನೆ ಕಾರ್ಯಕ್ರಮಗಳು ನಡೆದವು. ಮಹಿಳೆಯರ ತರಕಾರಿ ಆಭರಣಗಳ ಫ್ಯಾಶನ್ ಶೋ ಎಲ್ಲರ ಮನಸೆಳೆಯಿತು. ಸಂಯೋಜಕಿ ವೈಜಯಂತಿ ಸ್ವಾಗತಿಸಿ ಸಂಧ್ಯಾ ರಮೇಶ್ ವಂದಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಯೋಗೇಶ್ ಭಟ್, ಮೋಹನದಾಸ್ ನಾಯಕ್, ಸುಧೀಂದ್ರ ಭಂಡಾರಿ,ಸದಸ್ಯರು ಹಾಗೂ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಸ್ಥೆ, ಉಡುಪಿ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ನಾರಿ ನಮನ’ ವಿಶಿಷ್ಟ ಕಾರ್ಯಕ್ರಮ















Leave a Reply