
Lನೀಲಮ್ಮ ಚಾರಿಟೇಬಲ್ ಟ್ರಸ್ಟ್ ರಿ. ಆರೂರು ಇದರ ಅಧ್ಯಕ್ಷರಾದ ಶ್ರೀ ಆರೂರು ನಾರಾಯಣ ಶೆಟ್ಟಿ ಇವರು ಕೊಡಮಾಡಿದ ರೂಪಾಯಿ 68,000 ಮೌಲ್ಯದ 100 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ (ಬಿಸಿ ಹಾಗೂ ತಂಪು ನೀರು )ಘಟಕದ ಹಸ್ತಾಂತರ ಕಾರ್ಯಕ್ರಮವು ದಿನಾಂಕ 26.03.2025 ರಂದು ಎಸ್. ಎಮ್ ಎಸ್. ಕಾಲೇಜು ಬ್ರಹ್ಮಾವರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೀಲಮ್ಮ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಆರೂರು ತಿಮ್ಮಪ್ಪ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್, ಉಪಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ ಮತ್ತು ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಕಛೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಇವರು ನೀಲಮ್ಮ ಚಾರಿಟೇಬಲ್ ಟ್ರಸ್ಟ್ ನ ಈ ಘನ ಕಾರ್ಯಕ್ಕೆ ಕಾಲೇಜಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
Leave a Reply