ಕೋಟ: ಇಲ್ಲಿನ ಸಾಸ್ತಾನದಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಮಂಗಳವಾರ ಚಾಲನೆಗೊಂಡಿತು.
ಮೊದಲದಿನದ ಕಲ್ಯಾಣೋತ್ಸವದಲ್ಲಿ ಪೂರ್ವಾಹ್ನ ನಡೆದ ಧಾರ್ಮಿಕ ಕಾರ್ಯವನ್ನು ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ಸಮಿತಿ ಅಧ್ಯಕ್ಷ ಎಂ ಸಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಆರಂಭಗೊoಡವು.
ಮೂರು ದಿನಗಳ ವೈಭವದ ಶ್ರೀನಿವಾಸ ಕಲ್ಯಾಣೋತ್ಸದ ಮೊದಲ ದಿನದ ಧಾರ್ಮಿಕ ವಿಧಿವಿಧಾನಗಳಾದ ಸಾಮೂಹಿಕ ದೇವತಾ ಪ್ರಾರ್ಥನೆ,ಸ್ವಸ್ತಿ ವಾಚನ, ಪುಣ್ಯಾಹವಾಚನ, ದ್ವಾದಶನಾಳಿಕೇರ ಮಹಾಗಣಪತಿಯಾಗ, ಅಪರಾಹ್ನ ಪೂರ್ಣಾಹುತಿ ಪ್ರಸಾದ ವಿತರಣೆ , ವಿವಿಧ ಭಜನಾ ತಂಡಗಳಿದ ಭಜನಾ ಕಾರ್ಯಕ್ರಮ ಸಂಪನ್ನಗೊoಡವು. ಪೂರ್ವಾಹ್ನ ನಡೆದ ಧಾರ್ಮಿಕ ಕೈಂಕರ್ಯದಲ್ಲಿ ಸಮಿತಿಯ ಪ್ರದಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು ಭಾಗಿಯಾದರು.
ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ನಾಗರಾಜ ಗಾಣಿಗ, ಸಮಿತಿಯ ಪ್ರಮುಖರಾದ ಜಿ.ವಿಠ್ಠಲ ಪೂಜಾರಿ, ಗಣೇಶ್ ಚೆಲ್ಲೆಮಕ್ಕಿ, ರಮೇಶ್ ಕಾರಂತ್, ರಶಿರಾಜ್ ಸಾಸ್ತಾನ, ಸತ್ಯನಾರಾಯಣ ಚಡಗ, ಲೀಲಾವತಿ ಗಂಗಾಧರ್, ರವೀoದ್ರ ತಿಂಗಳಾಯ, ಪ್ರಶಾoತ್ ಶೆಟ್ಟಿ, ಸುಬ್ರಾಯ ಆಚಾರ್, ಸಂಜೀವ ದೇವಾಡಿಗ, ಪ್ರಸನ್ನ ತುಂಗ, ಜ್ಯೋತಿ ಉದಯ ಕುಮಾರ್, ಸುಲತಾ ಹೆಗ್ಡೆ, ರತ್ನಾ ಜೆ ರಾಜ್, ವಿಜಯ ಪೂಜಾರಿ ಬಾಳ್ಕುದ್ರು ಮತ್ತಿತರರು ಉಪಸ್ಥಿತರಿದ್ದರು.
ಇಂದು ಧಾರ್ಮಿಕ ಕಾರ್ಯಕ್ರಮ
ಏಪ್ರಿಲ್ 2ರಂದು ಬೆಳಿಗ್ಗೆ 9:00 ರಿಂದ ದೇವತಾ ಪ್ರಾರ್ಥನೆ ನವಗ್ರಹ ಹೋಮ ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಪ್ರಸಾದ ವಿತರಣೆ, ಮಧ್ಯಾಹ್ನ 3 ರಿಂದ ಶ್ರೀ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ ಸಂಜೆ 5:30ರಿಂದ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದವರಿAದ ಭಕ್ತಿರಸಮಂಜರಿ, ರಾತ್ರಿ 7 ರಿಂದ ವಿದ್ವಾನ್ ಡಾ.ವಿಜಯ ಮಂಜರ್ ಪಾಂಡೇಶ್ವರ ಇವರಿಂದ ಧಾರ್ಮಿಕ ಸಂದೇಶ ನೀಡಲಿದ್ದಾರೆ.
ಸಾಸ್ತಾನದಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕೈಂಕರ್ಯದಲ್ಲಿ ಸಮಿತಿಯ ಪ್ರದಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿಗಳು ಭಾಗಿಯಾದರು. ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ಸಮಿತಿ ಅಧ್ಯಕ್ಷ ಎಂ ಸಿ ಚಂದ್ರಶೇಖರ್, ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಇದ್ದರು.















Leave a Reply