
ಕೋಟ: ಸಮಾಜದಲ್ಲಿ ಆಗಾಗ ಧಾರ್ಮಿಕ ಪ್ರಜ್ಞೆ ಮೂಡಬೇಕಾದರೆ ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮಗಳು ಕಾಲಕಾಲಕ್ಕೆ ಆಯೋಜನೆಗೊಳ್ಳಬೇಕು ತನ್ಮೂಲಕ ಧರ್ಮ ಜಾಗೃತಿ ಸಾಧ್ಯ ಎಂದು ಧಾರ್ಮಿಕ ಚಿಂತಕ ,ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.
ಬುಧವಾರ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಸನಾತನ ಹಿಂದೂ ಧರ್ಮ ವಿಶ್ವದಲ್ಲೆ ಶ್ರೇಷ್ಠವಾದ ಧರ್ಮ ಇಲ್ಲಿ ನಾನಾ ರೀತಿಯ ಧಾರ್ಮಿಕ ಕೈಂಕರ್ಯಕ್ಕೆ ವೇದಿಕೆ ದೊರಯುತ್ತದೆ,ಆದರೆ ಅದು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಧರ್ಮದ ತಳಹದಿ ಗಟ್ಟಿಗೊಳ್ಳಲಿದೆ, ಶ್ರೀನಿವಾ ಸ ಕಲ್ಯಾಣ ಎಲ್ಲಾ ಜಾತಿ ಧರ್ಮಕ್ಕೂ ಮೀರಿ ಇಂದಿ ದೇಶಾದ್ಯಂತ ಪಸರಿಸಿಕೊಂಡಿದೆ.
,
ಸಂಪತ್ತು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಅದರ ಸದ್ಭಳಕೆ ಯಾವ ರೀತಿಯಲ್ಲಿ ಮಾಡುತ್ತೇವೆ ಎನ್ನುವುದು ಬಹುಮುಖ್ಯವಾದದ್ದು ಈ ದಿಸೆಯಲ್ಲಿ ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮಗಳ ಮೂಲಕ ಮನೆ ಮನೆಗಳಲ್ಲಿ ಭಕ್ತಿ ಭಾವ ಮೊಳಗಿದೆ ಎಂದು ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಸಭೆಯಲ್ಲಿ ತೆರೆದಿಟ್ಟರು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು ಮುಖ್ಯ ಅಭ್ಯಾಗತರಾಗಿ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ,ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ,ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸಕು, ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್,ಕಾರ್ತಿಕ್ ಎಸ್ಟೇಟ್ ಮಾಲಿಕರಾದ ಸುರೇಶ್ ಬೆಟ್ಟಿನ್,ಚಂದ್ರಶೇಖರ್ ಕಲ್ಪತರು ಉಪಸ್ಥಿತರಿದ್ದರು.ಸಮಿತಿ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಸಮಿತಿ ಸಾಂಸ್ಕೃತಿಕ ವಿಭಾಗದ ನರೇಂದ್ರ ಕುಮಾರ್ ಕೋಟ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಖ್ಯಾತ ಗಾಯಕ ಜಗದೀಶ್ ಆಚಾರ್ ಪುತ್ತೂರು ಹಾಗೂ ದಾಸಸಾಹಿತ್ಯ ಮೈಸೂರು ರಾಮಚಂದ್ರ ಆಚಾರ್ಯ ಇವರಿಂದ ಭಜನಾಮೃತ ಜರಗಿತು.
ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಇಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ,ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್ ಧಾರ್ಮಿಕ ಪ್ರವಚನಗೈದರು.
Leave a Reply