
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಕಾಲೋನಿ ನಿವಾಸಿ, ಮಾಜಿ ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರೂ, ಪ್ರಗತಿ ಪರ ರೈತ, ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದ ಚಂದ್ರಶೇಖರ ಬಿನ್ ಗಣಪತಿ ಸುಮಾರು 58 ವರ್ಷ ಮಡಿವಾಳ ಜನಾಂಗದವರಾಗಿದ್ದು, ಶರಾವತಿ ನದಿ ಹಿನ್ನಿರಿನಲ್ಲಿ ಜಾನವರು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದೂ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳ, ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಸ್ಥಳೀಯರು ಘಟನಾ ಸ್ಥಳದಲ್ಲಿ ಹಾಜರಿದ್ದು, ಶವ ಶೋಧನೆಯಲ್ಲಿ ಹರಸಾಹಸ ಪಟ್ಟು ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ಕಾನೂನು ಕ್ರಮವನ್ನೂ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯವರೂ ಕಾರ್ಯ ಪ್ರವೃತ್ತರಾಗಿದ್ದಾರೆ
ಮೃತ ಚಂದ್ರಶೇಖರ ಆತ್ಮಕ್ಕೆ ಚಿರಶಾಂತಿಯನ್ನೂ ಭಗವಂತ ಕರುಣಿಸಲಿ – ಕುಟುಂಬಕ್ಕೆ ಪರಮಾತ್ಮನೂ ಧೈರ್ಯ ನೀಡಲಿ – ಮಿಡಿಯುತ್ತಿದೆ ಕಂಬನಿಗಳು
@ಓಂಕಾರ ಎಸ್. ವಿ. ತಾಳಗುಪ್ಪ*
Leave a Reply