Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಫ್ರೆಂಡ್ಸ್ 24ನೇ ವರ್ಷದ ವಾರ್ಷಿಕೋತ್ಸವ
ಮಣೂರು ಫ್ರೆಂಡ್ಸ್ ಸಾಮಾಜಿಕ ಕಾರ್ಯ ವಿಶಿಷ್ಠವಾದದ್ದು- ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ


ಕೋಟ: ಸಂಘಸoಸ್ಥೆಗಳು ಹುಟ್ಟುವುದು ಸುಲಭ ಆದರೆ ಅದನ್ನು ನಿರಂತವಾಗಿ ಕೊಂಡ್ಯೊಯುವ ಕಾರ್ಯ ಕ್ಲಿಷ್ಟಕರ ಈ ನಿಟ್ಟಿನಲ್ಲಿ ಮಣೂರು ಫ್ರೆಂಡ್ಸ್ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು  ನಿವೃತ್ತ ಉಪನ್ಯಾಸಕ ಎಂ ಅರುಣಾಚಲ ಮಯ್ಯ ನುಡಿದರು.

ಶುಕ್ರವಾರ ಮಣೂರು ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಣೂರು ಫ್ರೆಂಡ್ಸ್ 24ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಮುಖಿ ಚಿಂತನೆಯ ಜತೆ ಸಾಮಾಜದಲ್ಲಿ ಮುಖ್ಯವಾಹಿನಿಯಲ್ಲಿ ದುಡಿದ ಕಲಾಸಾಧಕರನ್ನು , ಸಮಾಜಮುಖಿ ಕಾರ್ಯ ಮಾಡಿದವರನ್ನು ಗುರುತಿಸುವ ಕಾರ್ಯ ಅತ್ಯಂತ ಪ್ರಶಂಸನೀಯ ಎಂದರು. ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು.

ಇದೇ ವೇಳೆ ನಿವೃತ್ತ ಶಿಕ್ಷಕ ಎಂ ಎನ್ ಮಧ್ಯಸ್ಥ ಇವರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು.  ಕಾಯಕ ಯೋಗಿ ಕಾರ್ ಕೃಷ್ಣ ಪೂಜಾರಿ ಇವರಿಗೆ  ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಕಲಾವಿದರಾದ ವಿನಯ್ ಆಚಾರ್, ಐಶ್ವರ್ಯ ಆಚಾರ್ ಇವರುಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು. ಇದೇ ವೇಳೆ ಅಶಕ್ತರಿಗೆ ಸಹಾಯಹಸ್ತ ,ವಿದ್ಯಾರ್ಥಿವೇತನ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರ ಎಂ.ಸುಬ್ರಾಯ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ  ಉದ್ಯಮಿಗಳಾದ  ಕೆ.ವೆಂಕಟೇಶ ಪ್ರಭು, ನಾಗೇಶ್ ಪೂಜಾರಿ ಬಾಳೆಬೆಟ್ಟು, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್,ಅಧ್ಯಕ್ಷರಾದ ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು..ಫ್ರೆಂಡ್ಸ್ ಮಾಜಿ ಅಧ್ಯಕ್ಷ ಸುಧಾಕರ್ ಆಚಾರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಅಜಿತ್ ಆಚಾರ್ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ, ದಿನೇಶ್ ಆಚಾರ್  ಸಹಕರಿಸಿದರು.ಸಭಾ ಕಾರ್ಯಕ್ರಮದ ನಂತರ ರಘು ಪಾಂಡೇಶ್ವರ ನೇತೃತ್ವದ ಸಾಧನಾ ಕಲಾ ತಂಡದಿoದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.

ಮಣೂರು ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಣೂರು ಫ್ರೆಂಡ್ಸ್ 24ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿನಿವೃತ್ತ ಶಿಕ್ಷಕ ಎಂ ಎನ್ ಮಧ್ಯಸ್ಥ ಇವರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು. ಕಾಯಕ ಯೋಗಿ ಕಾರ್ ಕೃಷ್ಣ ಪೂಜಾರಿ ಇವರಿಗೆ  ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *